ಮಾ.30: ಕುಂಟಿನಿ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ- ದೈವಗಳ ಗಗ್ಗರ ಸೇವೆ

0

ಬೆಳ್ತಂಗಡಿ: ಗೇರುಕಟ್ಟೆ, ಕುಂಟಿನಿ ಮನೆಯಲ್ಲಿ ಕುಂಟಿನಿ ಕುಟುಂಬಸ್ಥರಿಂದ ಮಾ.30ರಂದು ಬೆಳಿಗ್ಗೆ 8 ರಿಂದ ಕುಂಟಿನಿ ಶ್ರೀ ರಾಘವೇಂದ್ರ ಬಾಂಗಿಣ್ಣಾಯರವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮ: ಬೆಳಿಗ್ಗೆ 8ರಿಂದ ಮಹಾಗಣಪತಿ ಹೋಮ, ಶ್ರೀ ವೆಂಕಟರಮಣ ದೇವರ ಪೂಜೆ (ಮುಡಿಪು ಕಟ್ಟುವುದು) ನಾಗಬನದಲ್ಲಿ ನಾಗ ದೇವರಿಗೆ ತಂಬಿಲ ಮತ್ತು ಆಶ್ಲೇಷ ಬಲಿ ಪೂಜೆ, ದೈವಗಳ ಗುಡಿಯಲ್ಲಿ ಕಲಶ, ಹೋಮ ಮತ್ತು ಶ್ರೀ ಸತ್ಯನಾರಾಯಣ ದೇವರ ಪೂಜೆ, ಪ್ರಸಾದ ವಿತರಣೆ ಸಂಜೆ 5 ರಿಂದ ಶ್ರೀ ದುರ್ಗಾ ಪೂಜೆ, 7.೦೦ಕ್ಕೆ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆದು ರಾತ್ರಿ ಗಂಟೆ 8.30ಕ್ಕೆ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ಭಂಡಾರ ತೆಗೆದು ಎಣ್ಣೆ ವೀಳ್ಯಾ ಕೊಟ್ಟು ಅನ್ನಸಂತರ್ಪಣೆ ರಾತ್ರಿ 10 ರಿಂದ ದೈವಗಳ ಗಗ್ಗರ ಸೇವೆ ನಡೆಯಲಿರುವುದು.

ಭಕ್ತಾಧಿಗಳು ಈ ಎಲ್ಲಾ ಕಾರ್ಯಕ್ರಮಗಳಿಗೆ ಆಗಮಿಸಿ ಶ್ರೀ ದೇವರ, ದೈವದ ಕೃಪೆಗೆ ಪಾತ್ರರಾಗಬೇಕಾಗಿ ಕೆ. ಕೃಷ್ಣ ಹಾಗೂ ಕುಂಟಿನಿ ಮನೆಯ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here