

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಳದ ಸಮೀಪದಿಂದ ಮಾ.25ರಂದು ತಡರಾತ್ರಿ ದನ ಕಳವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸ್ಥಳೀಯ ಅಂಗಡಿಯೊಂದರ ಮುಂಭಾಗದಿಂದ ದನ ಕಳವು ಮಾಡಲಾಗಿದ್ದು ಕಳವು ಮಾಡಲು ಉಪಯೋಗಿಸಿದ ಕಾರು ಓಡಾಟ ನಡೆಸುತ್ತಿರುವುದು ಸಿ.ಸಿ. ಟಿವಿಯಲ್ಲಿ ಸೆರೆಯಾಗಿದೆ.
ದನ ತುಂಬು ಗರ್ಭಿಣಿಯಾಗಿದ್ದು ವಾರಸುದಾರರು ಪೊಲೀಸರಿಗೆ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ.
ಕಳವಾಗಿರುವ ಹಸು ಗೋಶಾಲೆಗೆ ಸಂಬಂಧಪಟ್ಟ ಹಸು ಅಲ್ಲ ಎಂದು ದೇವಳದಿಂದ ಸ್ಪಷ್ಟನೆ ನೀಡಿದ್ದಾರೆ.