ಉಜಿರೆ: 2023-2024ನೇ ಸಾಲಿನ ವಾರ್ಷಿಕ ಕ್ರೀಡಾಕೂಟದ ಚಾಲನೆಯು ಮಾ.25ರಂದು ಡಾ.ರತ್ನವರ್ಮ ಹೆಗ್ಗಡೆ ಕ್ರೀಡಾಂಗಣ ಉಜಿರೆಯಲ್ಲಿ ನಡೆಯಿತು.
ಮಾಜಿ ರಾಷ್ಟ್ರೀಯ ಕ್ರೀಡಾಪಟು ಯೋಗೀಶ್ ಕುಮಾರ್ ನಡಕ್ಕರ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆಯನ್ನು ನೀಡಿದರು.ಎಸ್.ಡಿ.ಎಮ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಎಸ್.ಡಿ.ಎಮ್ ಕಾಲೇಜಿನ ಶಾರೀರಿಕ ಶಿಕ್ಷಣ ನಿರ್ದೇಶಕ ರಮೇಶ್ ಹೆಚ್, ಶಾರದ, ಸುದಿನ, ಸಂದೇಶ್ ಪೂಂಜ ಉಪಸ್ಥಿತರಿದ್ದರು.
ರಾಷ್ಟ್ರಮಟ್ಟದ ಖೇಲೋ ಇಂಡಿಯಾ ಚಿನ್ನದ ಪದಕ ವಿಜೇತ ಕಬ್ಬಡಿ ಆಟಗಾರ ಸುಶಾಂತ್ ಶೆಟ್ಟಿ ಉಪಸ್ಥಿತರಿದ್ದರು.
p>