

ಕೊಕ್ರಾಡಿ: ಕೊಕ್ರಾಡಿಯ ಹೇರ್ದಂಡಿ ಬ್ಯಾಕ್ಯಾರುವಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದೈವಸ್ಥಾನದಲ್ಲಿ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕ ಹಾಗೂ ನೇಮೋತ್ಸವವು ಮಾ. 26ರಿಂದ 29ವರೆಗೆ ಜರಗಲಿದೆ ಎಂದು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಹೇಳಿದರು.
ಮಾ.25ರಂದು ದೈವಸ್ಥಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೊಕ್ರಾಡಿ ಮತ್ತು ಅಂಡಿಂಜೆ ಗ್ರಾಮಸ್ಥರ ಆರಾಧನಾ ಶ್ರದ್ಧಾ ಕೇಂದ್ರ ಇದಾಗಿದ್ದು 800 ವರ್ಷಗಳ ಇತಿಹಾಸ ವಿರುವ ಸಾನಿಧ್ಯ ಕಳೆದ 70 ವರ್ಷಗಳಿಂದ ನಿರಂತರ ವಾರ್ಷಿಕ ನೇಮೋತ್ಸವ ಉತ್ಸವ ನಡೆಯುತ್ತಾ ಬರುತ್ತಿದೆ. ನೂತನ ಶಿಲಾಮಯ ಪಂಚಾಂಗದಿಂದ ಕೂಡಿದ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿ ನಿರ್ಮಾಣ ಗೊಂಡು ಇದರ ಪುನರ್ ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕ, ನೇಮೋತ್ಸವ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಾ.26ರಂದು ಸಂಜೆ ಕೊಕ್ರಾಡಿ ಅತ್ರಿಜಾಲು ದೇವಸ್ಥಾನದಿಂದ ಭವ್ಯ ಹೊರೆಕಾಣಿಕೆ ಮೆರವಣಿಗೆ ಜೊತೆಗೆ ಶಿಲಾಮಯ ತಲಾ 900 ಕೆ.ಜಿ ತೂಕದ 5.25 ಆಡಿಯ ಕೋಟಿ ಚೆನ್ನಯ್ಯ ಪ್ರತಿಮೆಯನ್ನು ಮೆರವಣಿಗೆಯಲ್ಲಿ ತರಲಾಗುವುದು.ಎರಡು ದಿನ ಸಂಜೆ ಧಾರ್ಮಿಕ ಸಭೆ ನಡೆಯಲಿದೆ.ಮಾ.29ರಂದು ಕೊಕ್ರಾಡಿ ಶ್ರೀ ಸುಬ್ರಹ್ಮಣ್ಯ ಕುಣಿತ ಭಜನಾ ಮಂಡಳಿಯ ಸಂಯೋಜನೆಯಲ್ಲಿ ಅಂತರ್ ಜಿಲ್ಲಾ ಮಟ್ಟದ ಕುಣಿತಾ ಭಜನಾ ಸ್ಪರ್ಧೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಪ್ರದಾನ ಕಾರ್ಯದರ್ಶಿ ಅಜಿತ್ ಕುಮಾರ್ ಹಿರ್ತೊಟ್ಟುಗುತ್ತು ಕೊಕ್ರಾಡಿ, ಕಾರ್ಯಾಧ್ಯಕ್ಷ ಪರ್ಷ್ಶ್ವನಾಥ ಬಂಗಸಾಲ್ಕೂರು ಗುತ್ತು, ಕೋಶಾಧಿಕಾರಿ ಸೂರ್ಯನಾರಾಯಣ ಡಿ.ಕೆ., ಆಡಳಿತ ಸಮಿತಿಯ ಕೋಶಾಧಿಕಾರಿ ಪ್ರಕಾಶ್ ಕುಮಾರ್ ಜೈನ್ ಹೊಸಮನೆ ಗುತ್ತು, ಜೀರ್ಣೋದ್ದಾರ ಸಮಿತಿಯ ಸಲಹೆಗಾರ ಮಂಜಪ್ಪ, ಸದಸ್ಯರಾದ ಲಕ್ಷ್ಮಣ ಕೋಟ್ಯಾನ್, ರಂಗರಾಜು ಉಪಸ್ಥಿತರಿದ್ದರು.