ಮದ್ರಸ ಪಬ್ಲಿಕ್ ಪರೀಕ್ಷೆ: 7ನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ಸಈದಾ ಗೆ ಶೇ.100 ಫಲಿತಾಂಶ

0

ಕುಪ್ಪೆಟ್ಟಿ: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಇದರ ಅಧೀನದಲ್ಲಿ ನಡೆಸಿದ, 7ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಕುಪ್ಪೆಟ್ಟಿ ರೇಂಜ್ ವ್ಯಾಪ್ತಿಯ, ನೂರುಲ್ ಹುದಾ ಸೆಕೆಂಡರಿ ಮದ್ರಸ ನೆಕ್ಕಿಲು ಇಲ್ಲಿನ ವಿದ್ಯಾರ್ಥಿನಿ ಫಾತಿಮತ್ ಸಈದಾ ಎನ್ 600 ರಲ್ಲಿ 600 ಅಂಕ ಗಳಿಸಿ ರಾೖಂಕ್ ನೊಂದಿಗೆ ತೇರ್ಗಡೆ ಹೊಂದಿದ್ದಾಳೆ.

ಎಸ್.ಜೆ.ಎಂ ರಾಜ್ಯ ಕಾರ್ಯದರ್ಶಿ ಹಾಗೂ ಎಸ್ ವೈ ಎಸ್ ಸಹಿತ ಹಲವು ಸುನ್ನೀ ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಎನ್.ಎಂ ಶರೀಫ್ ಸಖಾಫಿ ನೆಕ್ಕಿಲ್ ಮತ್ತು ಫಾತಿಮತ್ ಸಲೀಮಾ ದಂಪತಿಗಳ ಪುತ್ರಿ ಆಗಿರುತ್ತಾಳೆ.

ಕೆಲವು ತಿಂಗಳುಗಳ ಹಿಂದೆ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ನಡೆಸಿದ, ರಾಷ್ಟ್ರೀಯ ಸ್ಮಾರ್ಟ್ ಸ್ಕಾಲರ್ಶಿಪ್ ಎಕ್ಸಾಂ ನಲ್ಲೂ ಅತ್ಯಧಿಕ ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುತ್ತಾಳೆ.

ವಿದ್ಯಾರ್ಥಿನಿ ಮತ್ತು ಇವಳ ಯಶಸ್ವಿಗೆ ಸಹಕರಿಸಿದ ತರಗತಿ ಅಧ್ಯಾಪಕರು ಸಹಿತ ಇತರ ಅಧ್ಯಾಪಕರಿಗೂ, ಆಡಳಿತ ಸಮಿತಿ ಹಾಗೂ ಜಮಾಅತರಿಗೆ ಕುಟುಂಬ ಸಂಬಂಧಿಕರು ಅಭಿನಂದನೆ ಸಲ್ಲಿಸಿದ್ದಾರೆ.

p>

LEAVE A REPLY

Please enter your comment!
Please enter your name here