ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ ಶಾಲೆಯಲ್ಲಿ ಮಕ್ಕಳಿಂದ ವ್ಯಾಪಾರ ಮೇಳ

0

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾ.9ರಂದು ‘ಮಕ್ಕಳಿಂದ ವ್ಯಾಪಾರ ಮೇಳ’ ನಡೆಯಿತು.

ದೈನಂದಿನ ಜೀವನದಲ್ಲಿ ಗಣಿತ ಹೇಗೆ ಅನ್ವಯಿಸುತ್ತದೆ ಎಂಬುದನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಮತ್ತು ಮಕ್ಕಳ ಕೌಶಲ್ಯ ವೃದ್ಧಿಸುವ ಸಲುವಾಗಿ ಪ್ರಾಯೋಗಿಕವಾಗಿ ಈ ವ್ಯಾಪಾರ ಮೇಳವನ್ನು ಎಲ್ಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ಸಂಘಟಿಸಲಾಯಿತು.

ಪೋಷಕರು, ವಿದ್ಯಾಭಿಮಾನಿಗಳು ಮತ್ತು ಊರವರು ಹೆಚ್ಚಿನ ಸಂಖ್ಯೆಯಲ್ಲಿ ಈ ವ್ಯಾಪಾರ ಮೇಳದಲ್ಲಿ ಗ್ರಾಹಕರಾಗಿ ಬಂದು, ಮಕ್ಕಳನ್ನು ಪ್ರೋತ್ಸಾಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here