ಉಜಿರೆ: ಬೆನಕ ಹೆಲ್ತ್ ಸೆಂಟರ್ ನಲ್ಲಿ ಯಶಸ್ವಿನಿ ಯೋಜನೆಯಲ್ಲಿ ಯಶಸ್ವಿ ಮೊಣಕಾಲಿನ ಬದಲಿ ಶಸ್ತ್ರ ಚಿಕಿತ್ಸೆ

0

ಉಜಿರೆ: ರೈತರೇ ಹೆಚ್ಚಾಗಿರುವ ಸಹಕಾರಿ ಸಂಘದ ಸದಸ್ಯರುಗಳಿಗೆ ಸರಕಾರ ನೀಡಿರುವ ಯಶಸ್ಸಿನಿ ಯೋಜನೆಯಲ್ಲಿ ಇದೀಗ ಗ್ರಾಮೀಣ ಪ್ರದೇಶದಲ್ಲಿರುವ ಬೆನಕ ಹೆಲ್ತ್ ಸೆಂಟರ್ ನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಎನ್ ಸಿ ಜಯರಾಮ್ ಯಶಸ್ವಿನಿ ಯೋಜನೆಯ ಫಲಾನುಭಾವಿಯಾಗಿದ್ದು.

ಇವರಿಗೆ ಮಾ.14ರಂದು ಬಲಕಾಲಿನ ಮೊಣಗಂಟು ಬದಲಿ ಶಸ್ತ್ರಚಿಕಿತ್ಸೆಯು (Total Knee replacement) ಯಶಸ್ವಿನಿ ಯೋಜನೆಯಡಿಯಲ್ಲಿ ಆಗಿದ್ದು ಮಂಗಳೂರಿನ ಖ್ಯಾತ ಮೂಳೆ ತಜ್ಞರಾದ ಡಾ.ವಿಕ್ರಂ ಶೆಟ್ಟಿ, ಬೆನಕ ಆಸ್ಪತ್ರೆಯ ಎಲುಬು ಮತ್ತು ಮೂಳೆ ತಜ್ಞರಾದ ಡಾ.ರಜತ್, ವೈದ್ಯಕೀಯ ನಿರ್ದೇಶಕರಾದ ಡಾ.ಗೋಪಾಲಕೃಷ್ಣರನ್ನು ಒಳಗೊಂಡ ತಂಡ ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿಸಿದರು.

ಈಗ ರೋಗಿಯು ಉತ್ತಮವಾಗಿ ನಡೆಯುತ್ತಿದ್ದಾರೆ.ಯಶಸ್ವಿನಿ ಯೋಜನೆಯು ಗ್ರಾಮೀಣ ರೈತರಿಗೆ ವರದಾನವಾಗಿದೆ.ಅತ್ಯಂತ ಕ್ಲಿಷ್ಟ ಹಾಗೂ ಪಟ್ಟಣ ಪ್ರದೇಶದಲ್ಲಿ ನಡೆಸುವ ಈ ಶಸ್ತ್ರ ಚಿಕಿತ್ಸೆಯು ಇದೀಗ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ನಡೆದಿದ್ದು ಹೆಮ್ಮೆಯ ವಿಷಯ ಎಂದು ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಇವರು ಪತ್ರಿಕಾ ಮಾದ್ಯಮಕ್ಕೆ ತಿಳಿಸಿದರು.

p>

LEAVE A REPLY

Please enter your comment!
Please enter your name here