ಬೆಳ್ತಂಗಡಿ: ಮಹಿಳಾ ವೃಂದದಲ್ಲಿ ಮಹಿಳಾ ದಿನಾಚರಣೆ

0

ಬೆಳ್ತಂಗಡಿ: ಮಹಿಳಾ ವೃಂದದಲ್ಲಿ ಮಹಿಳಾ ದಿನಾಚರಣೆಯನ್ನು ಮಾಜಿ ಅಧ್ಯಕ್ಷೆ ರಾಜಮ್ಮ ಶ್ರೀನಿವಾಸ್ ಶೆಟ್ಟಿ ಯವರು ಮಾ.10ರಂದು ಉದ್ಘಾಟಿಸಿದರು.

ಮಹಿಳಾ ವೃಂದದ ಅಧ್ಯಕ್ಷರಾದ ಆಶಾ ಸತೀಶ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ತಾರಕೇಸರಿ, ಕ್ಷೇತ್ರ ಶಿಕ್ಷಣಾಧಿಕಾರಿ (ಪ್ರಭಾರ) ಬೆಳ್ತಂಗಡಿ, ಸುಷ್ಮಾ ಡೊಂಗ್ರೆ, ಸ್ವಾತಿ ಕ್ಲಿನಿಕ್, ಅಳದಂಗಡಿ, ಗೌರವ ಉಪಸ್ಥಿತಿ ಸವಿತಾ ಜಯದೇವ್, ಅಧ್ಯಕ್ಷರು ತಾಲೂಕು ಮಹಿಳಾ ಮಂಡಲ ಒಕ್ಕೂಟ ಉಪಸ್ಥಿತರಿದ್ದರು.

ಮಹಿಳಾ ವೃಂದದ ಕೋಶಾಧಿಕಾರಿ ರಶ್ಮಿ ಪಟವರ್ಧನ್ ಪ್ರಸ್ತಾವಿಕವಾಗಿ ಮಾತನಾಡಿ, ಕಾರ್ಯದರ್ಶಿಯಾದ ವೀಣಾ ವಿನೋದ್ ಕುಮಾರ್ ರವರು ವರದಿ ವಾಚಿಸಿದರು.ಕಾರ್ಯಕ್ರಮದಲ್ಲಿ ರಿಪಬ್ಲಿಕ್ ಡೇ ಎನ್.ಸಿ.ಸಿ ಕ್ಯಾಡೆಡ್ ಕುಮಾರಿ ರಾಧಿಕಾ ಸಿ ಎಸ್, ಮಹಿಳಾ ವೃಂದದ ಸದಸ್ಯೆ ಸಂಧ್ಯಾ ಪಾಳಂದೆ, ಶಾಂತಿ ರಿಕ್ಷಾ ಡ್ರೈವರ್ ಇವರನ್ನು ಮಹಿಳಾ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಲಾಯಿತು.

ಮಹಿಳಾ ವೃಂದದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರ ಪಟ್ಟಿಯನ್ನು ಉಮಾ ಆರ್ ರಾವ್ ಮಂಡಿಸಿದರು.ಉಪಸ್ಥಿತರಿದ್ದ ಅತಿಥಿಗಳು ವಿಜೇತರಿಗೆ ಬಹುಮಾನವನ್ನು ನೀಡಿದರು.

ಮಹಿಳಾ ಸಾಂತ್ವನದ ಸೌಮ್ಯ ಶಾರದಾ, ಲತಾ ಪ್ರೀತಿ ಆರ್ ರಾವ್, ವೀಣಾ ವಿನೋದ್ ಕುಮಾರ್ ಹಾಗೂ ಕುಮಾರಿ ವಂಶಿಕ ಮತ್ತು ಕುಮಾರಿ ಇಶಿಕಾ ಇವರಿಂದ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮಂಜುಳಾ ಡಿ ಪ್ರಸಾದ್ ಹಾಗೂ ಸಂಧ್ಯಾ ಪಾಳಂದೆ ಇವರ ಸಂಗೀತ ಕಾರ್ಯಕ್ರಮ ನಡೆದಿತ್ತು.ಹೇಮಾ ಕೆ ಕಾರ್ಯಕ್ರಮ ನಿರೂಪಿಸಿದರು.ಪ್ರೀತಿ ಆರ್ ರಾವ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಉಮಾ ಆರ್ ರಾವ್ ವಂದಿಸಿದರು.

LEAVE A REPLY

Please enter your comment!
Please enter your name here