ಕೊಕ್ಕಡ: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಪಿಟ್ ಇಂಡಿಯಾ ಕಾರ್ಯಕ್ರಮ

0

ಕೊಕ್ಕಡ: ಜೆಸಿಐ ಕಪಿಲ ಘಟಕ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇವುಗಳ ಸಹಭಾಗಿತ್ವದಲ್ಲಿ ಶಿಬರಾಜೆ ಪಾದೆ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಫಿಟ್ ಇಂಡಿಯಾ ಕಾರ್ಯಕ್ರಮವನ್ನು ಮಾ.15ರಂದು ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನಿಖಿತಾ ಜೈಸನ್ ಸಮುದಾಯ ಆರೋಗ್ಯ ಅಧಿಕಾರಿ ಇವರು ಈ ಕಾರ್ಯಕ್ರಮದಲ್ಲಿ ಮಾರಕ ರೋಗ ಕ್ಯಾನ್ಸರ್ ನ ಬಗ್ಗೆ ಅರಿವು ಮೂಡಿಸಿ.ಅದನ್ನು ತಡೆಗಟ್ಟಬಹುದಾದ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜೆಸಿಐ ಕೊಕ್ಕಡ ಕಪಿಲ ಘಟಕವು ಈ ತಿಂಗಳ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದ ಪ್ರಯುಕ್ತ ನಿವೃತ್ತ ಅಂಗನವಾಡಿ ಶಿಕ್ಷಕಿ ಪಿಟಿ ಎಲ್ಲಿಯಮ್ಮ ಮತ್ತು ಸಮುದಾಯ ಆರೋಗ್ಯ ಅಧಿಕಾರಿ ನಿಕಿತಾ ಜೈಸನ್ ರವರನ್ನು ಘಟಕದ ವತಿಯಿಂದ ಗುರುತಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಕೊಕ್ಕಡ ಕಪಿಲ ಘಟಕದ ಅಧ್ಯಕ್ಷ ಜೆಸಿ ಎಚ್ ಜಿ ಎಫ್ ಸಂತೋಷ್ ಜೈನ್, ಕಾರ್ಯದರ್ಶಿ ಜೆ ಸಿ ಅಕ್ಷತ್ ರೈ, ನಿಕಟಪೂರ್ವ ಅಧ್ಯಕ್ಷ ಜೆ ಸಿ ಜಿತೇಶ್ ಎಲ್ ಪಿರೇರಾ, ಯೋಜನೆ ನಿರ್ದೇಶಕಿ ಜೆ ಸಿ ಪ್ರಿಯಾ ಜೆ ಅಮಿನ್, ಪೂರ್ವ ಅಧ್ಯಕ್ಷ ಜೆ ಸಿ ಜೆ ಎಫ್ ಎಂ ಕ ಶ್ರೀಧರ್ ರಾವ್, ಘಟಕದ ಮಾರ್ಗದರ್ಶಕ ಜೆ ಸಿ ಎಚ್ ಜಿ ಎಫ್ ಜೋಸೆಫ್ ಪೀರೇರ, ಕೋಶಾಧಿಕಾರಿ ಜೆ ಸಿ ವಿದ್ಯೆಂದ್ರ ಎಸ್, ಬೆಲ್ಲಾರೆ ಜೆಸಿ ಘಟಕದ ಸದಸ್ಯ ಜೆಸಿ ಸೀತಾರಾಮ್ ರೈ, ಆಶಾ ಕಾರ್ಯಕರ್ತೆರಾದ ಪುಷ್ಪ ಕೆ ಗುಂಡಿಗೆದ್ದೆ, ರೇವತಿ ಬಟ್ಯಾಲ್, ಶ್ರೀ ಶಕ್ತಿ ಸಂಘದ ಸರ್ವ ಸದಸ್ಯರು ಹಾಗೂ ಅಂಗನವಾಡಿ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಜೆಸಿ ವಾಣಿ ಯನ್ನು ಅನ್ಸಿಲ್ಲಾ ರೋಶ್ನಿ ರೋಡ್ರಿ ಗಸ್ ವಾಚಿಸಿದರು. ಜೆ ಸಿ ಎಚ್ ಜಿ ಎಫ್ ಸಂತೋಷ್ ಸ್ವಾಗತಿಸಿ, ಜೆಸಿ ಅಕ್ಷತ್ ರೈ ಕಾರ್ಯಕ್ರಮವನ್ನು ವಂದಿಸಿದರು.

LEAVE A REPLY

Please enter your comment!
Please enter your name here