ಮಡಂತ್ಯಾರು: ಜೆಸಿಐ ಘಟಕದಿಂದ ವಿದ್ಯುತ್ ಇಲಾಖೆಯಲ್ಲಿ ಹಾಗೂ ರಕ್ತದಾನ ಮಾಡುತ್ತಿರುವವರನ್ನು ಗುರುತಿಸಿ ಗೌರವ

0

ಮಡಂತ್ಯಾರು: ಜೆಸಿಐ ವಿಜಯ 2024 ಘಟಕದಿಂದ ಫೆಬ್ರವರಿ ತಿಂಗಳ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದ ಅಡಿಯಲ್ಲಿ ವಿದ್ಯುತ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ 35ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿರುವವರನ್ನು ಮಾ.2ರಂದು ಗುರುತಿಸಿ ಗೌರವಿಸಲಾಯಿತು.

ಲೈನ್ ಮ್ಯಾನ್ ಖಾಸಿಂ ಹಾಗೂ ರಕ್ತದಾನ ಮಾಡಿದ ಗುರುಪ್ರಸಾದ್ ನಾಯಕ್ ಅವರನ್ನು ಸೈಲೆಂಟ್ ಸ್ಟಾರ್ ಆಗಿ ಗುರುತಿಸಿ ಗೌರವಿಸಲಾಯಿತು.

ಘಟಕದ ಅಧ್ಯಕ್ಷ ಜೆಸಿ ವಿಕೇಶ್, ಮಾನ್ಯ ನಿಕಟ ಪೂರ್ವ ಅಧ್ಯಕ್ಷ ಜೆಸಿ ಅಶೋಕ್, ವಲಯ ಉಪಾಧ್ಯಕ್ಷ ಜೇಸಿ ಶಂಕರ್ ರಾವ್, ಲೇಡಿ ಜೆಸಿ ಕೋಆರ್ಡಿನೇಟರ್ ಜೆಸಿ ತೃಪ್ತಿ ವಿಕೇಷ್, ಕಾರ್ಯದರ್ಶಿ ಜೇಸಿ ಸಂಯುಕ್ತ ಪೂಜಾರಿ ಹಾಗೂ ಪೂರ್ವ ಅದ್ಯಕ್ಷರು ಜೆಸಿಐ ಸದಸ್ಯರು ಮತ್ತು ಸ್ವರ ಕನ್ನಿಕೆ ಬಿರುದಾಂಕಿತೆ ಖ್ಯಾತ ಭಾಗವತರಾದ ಕಾವ್ಯಶ್ರೀ ನಾಯಕ್ ಹಾಗೂ ಜೆಸಿಯೇತರ ಬಂದುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here