ಶಿಶಿಲ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ- ಲೋಕ ಕಲ್ಯಾಣಕ್ಕಾಗಿ ಚವ್ವಿಶ ತೀರ್ಥಂಕರರ ಆರಾಧನೆ

0

ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಕಾರ್ಕಳ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮಿಜಿಯವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಅಮ್ಮನವರ ಮಾರ್ಗದರ್ಶನದೊಂದಿಗೆ ಲೋಕಕಲ್ಯಾಣಕ್ಕಾಗಿ ಚವ್ವಿಶ ತೀರ್ಥಂಕರರ ಆರಾಧನೆ ಬಹು ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭದಲ್ಲಿ ಮಧ್ಯಾಹ್ನ ಭೋಜನದ ದಾನಿಗಳಾದ ಶಶಿ ಪ್ರಭ ಅಹಿಂಸಾ ಉಜಿರೆ, ಪೂಜಾ ಕರ್ತೃಗಳಾದ ಚಂಚಲ ಕೃಷ್ಣರಾಜ ಧರ್ಮಸ್ಥಳ ಬೆಳಗಿನ ಉಪಹಾರದ ದಾನಿಗಳಾದ ಶಕುಂತಲಾ ಡಾ.ಜಯಕೀರ್ತಿ ಜೈನ್, ಸಮಿತಿಯ ಶೋಭಾ ಸಂತೋಷ್ ಜೈನ್, ಚಂದನ ವೃಷಭ, ವಿಮಲ ವಿಜಯ್ ಕುಮಾರ್, ಶಾಂತಿ ರಾಜೇಂದ್ರ ಕುಮಾರ್ ಮುಡಾರು, ಪ್ರೇಮ ವಸಂತ್ ಕುಮಾರ್ ಉಜಿರೆ, ರೇಷ್ಮಾ ಫಣಿರಾಜ್, ಸುರಭಿ ಜಯಕುಮಾರ್ ಇವರು ಆರಾಧನಾ ಕಾರ್ಯಕ್ರಮದಲ್ಲಿ ಪೂಜೆ ನೆರವೇರಿಸಿದರು.

ಪ್ರಧಾನ ಪುರೋಹಿತರಾಗಿ ಪ್ರತಿಷ್ಠಾಚಾರ್ಯ ಜಯರಾಜ್ ಇಂದ್ರ ಬೆಳ್ತಂಗಡಿ, ಅರಹಂತ ಇಂದ್ರ ಶಿಶಿಲ, ಶ್ರೀ ಕೀರ್ತಿ ಇಂದ್ರ ಬೈಲ ಬೈಲoಗಡಿ ಚಿತ್ತರoಜನ್ ಶಿರ್ತಾಡಿ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಶಿಶುಗಲಿ ರಾಣಿ ಕಾಳಾಲ ದೇವಿ ಜೈನ ಮಹಿಳಾ ಸಮಾಜದ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here