ಉಜಿರೆ: ಮುಂಡತ್ತೋಡಿ ಮುಂಡತ್ತೋಡಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಮಂಡಳಿ, ದುರ್ಗಾವಾಹಿನಿ ವತಿಯಿಂದ ಗೋ ಪೂಜೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ನೃತ್ಯ ವೈವಿಧ್ಯ ಕಾರ್ಯಕ್ರಮ, ಶ್ರೀ ಕೃಷ್ಣ ಭಜನಾ ಮಂಡಳಿ ಚಾವಡಿ ಮುಂಡತ್ತೋಡಿ ಇವರಿಂದ ಭಜನಾ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮವು ಮಾ.9ರಂದು ಬಜರಂಗಿ ಮೈದಾನ ಮುಂಡತ್ತೋಡಿಯಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ, ಚಾವಡಿ ಸುಮೇದ ಭಟ್ ವಹಿಸಿದ್ದರು.ಧಾರ್ಮಿಕ ಭಾಷಣಕಾರರಾಗಿ ಡಾ.ಎಮ್.ಎನ್ ದಯಾಕರ್, ಉಜಿರೆ ಶ್ರೀ.ಧ.ಆಂಗ್ಲಮಾಧ್ಯಮ ಶಿಕ್ಷಕಿ ಸವಿತಾ ವೇದಪ್ರಕಾಶ್, ನಿವೃತ್ತ ಕೆ.ಎಸ್.ಆರ್.ಟಿ.ಸಿ ಚಾಲಕ ಕೆ.ಗೋಪಾಲಕೃಷ್ಣ ಪೂಜಾರಿ, ವಿ.ಹಿಂ.ಪ.ಬಜರಂಗದಳ ಪ್ರಚಾರ ಪ್ರಸಾರ ಪ್ರಮುಖ್ ನಾಗೇಶ್ ಕಲ್ಮಂಜ, ಮುಂಡತ್ತೋಡಿ ಸಮಿತಿ ವಿ.ಹಿಂ.ಪ ಕಾರ್ಯದರ್ಶಿ ಶಶಿಧರ್ ಎನ್. ಹಾಗೂ ನಿವೃತ್ತ ಸೈನಿಕ ಬಸವರಾಜ್ ರವರು ಉಪಸ್ಥಿತಿತರಿದ್ದರು.
ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಕೃಷ್ಣ ಭಜನಾ ಮಂಡಳಿ, ಚಾವಡಿ ಮುಂಡತ್ತೋಡಿ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಬಲೆ ತೆಲಿಪಾಲೆ ಖ್ಯಾತಿಯ ತೆಲಿಕೆದ ತೆನಾಲಿ ತಂಡ ಕಾರ್ಕಳ ಇವರಿಂದ “ತೆಲಿಕೆದ ಬರ್ಸ ಕಾಮಿಡಿ” ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮವನ್ನು ವಿ.ಹಿಂ.ಪ. ಪ್ರಸಾರ ಪ್ರಚಾರ ಪ್ರಮುಖ್ ಮುಂಡತ್ತೋಡಿ ಸ್ವಾಗತಿಸಿ, ಸಮಿತಿಯ ವೀರೇಶ್ ಹಾಗೂ ವಿದ್ಯಾರ್ಥಿ ಪ್ರಮುಖ್ ಸುಶಾಂತ್ ರವರು ಧನ್ಯವಾದವಿತ್ತರು.