ಬೆಳಾಲು ಸಹಕಾರ ಸಂಘದಿಂದ ಗ್ರಾಮ ಪಂಚಾಯತಿಗೆ ಬ್ಯಾರಿಕೇಡ್ ಕೊಡುಗೆ

0

ಬೆಳಾಲು: ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಅಧ್ಯಕ್ಷ ಎಚ್. ಪದ್ಮ ಗೌಡರ ನೇತೃತ್ವದಲ್ಲಿ ಬೆಳಾಲು ಗ್ರಾಮ ಪಂಚಾಯತಿಗೆ ಎರಡು ಬ್ಯಾರಿಕೇಡ್ ಗಳನ್ನು ಮಾ.14 ರಂದು ಕೊಡುಗೆ ನೀಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪಂಚಾಯತ್ ಸದಸ್ಯ ಸುರೇಂದ್ರ ಗೌಡ ಹಸ್ತಾಂತರ ಮಾಡಿ ಉದ್ಘಾಟಿಸಿದರು.

ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀ ಬಾಯಿ ಹೆಚ್, ಪಂಚಾಯತ್ ಸದಸ್ಯ ಸತೀಶ್ ಗೌಡ ಎಳ್ಳುಗದ್ದೆ, ಸಹಕಾರ ಸಂಘದ ನಿರ್ದೇಶಕರುಗಳಾದ ದಾಮೋದರ ಗೌಡ ಸುರುಳಿ, ಸುಲೈಮಾನ್ ಬಿ, ದಿನೇಶ್ ಕೋಟ್ಯಾನ್, ವಿಜಯ ಗೌಡ, ಎಲ್ಯಣ್ಣ ನಾಯ್ಕ, ಮಾಣಿಗ, ಸೀತಮ್ಮ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಗೌಡ, ಬೆಳಾಲು ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್, ಸಹಕಾರ ಸಂಘದ ಸಿಬ್ಬಂದಿ ವರ್ಗ, ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here