

ಬೆಳಾಲು: ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿ ಇದರ ವತಿಯಿಂದ ಮಾಯ ಮಹಾದೇವ ದೇವಸ್ಥಾನದ ವಠಾರದಲ್ಲಿ ಎ.13ರಂದು ನಡೆಯಲಿರುವ ಭಜನಾ ಕಮ್ಮಟದ ಆಮಂತ್ರಣ ಪತ್ರಿಕೆಯನ್ನು ಮಾ.13ರಂದು ದೇವಸ್ಥಾನದಲ್ಲಿ ಅರ್ಚಕ ಕೇಶವ ರಾಮಯಾಜಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾಯಗುತ್ತು ಪುಸ್ಪದಂತ್ ಜೈನ್, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ ಮಂಜನೊಟ್ಟು, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಮಾಯ, ಭಜನಾ ಮಂಡಳಿ ಮಾಜಿ ಅಧ್ಯಕ್ಷರಾದ
ಪೆರಣ ಗೌಡ ಪರಾರಿ, ವಸಂತ ಬಜಕ್ಕಲ, ಅಧ್ಯಕ್ಷ ಹರೀಶ್ ಆಚಾರ್ಯ ಕುದ್ರಾಲ್, ಕಾರ್ಯದರ್ಶಿ ಶಿವಪ್ರಸಾದ್ ಮಾಯ, ಉಪಾಧ್ಯಕ್ಷ ಶಶಿಧರ ಗೊಲ್ಲ ಬೆಳಾಲು, ರಂಜನ್ ಮಾಯ ಮಹಿಳಾ ಸಂಚಾಲಕಿ ಭವಾನಿ ಮರ್ಪಲ್, ವಸಂತಿ ಪರರಿ, ಮಮತ ಮಾಯ, ಲಲಿತಾ ಮಾಯ ಮೊದಲಾದವರು ಉಪಸ್ಥಿತರಿದ್ದರು.