

ಕಳೆಂಜ: ಸದಾಶಿವೇಶ್ವರ ದೇವಳದಲ್ಲಿ ಶಿವರಾತ್ರಿ ಉತ್ಸವ ಸಂಭ್ರಮ ಸಡಗರದಿಂದ ಮಾ.8ರಂದು ನೆರವೇರಿತು.
ಬೆಳಿಗ್ಗೆ 10ಗಂಟೆಗೆ ಏಕಾದಶ ರುದ್ರಾಭಿಷೇಕ, ನಂತರ ಸೀಯಾಳ ಅಭಿಷೇಕ, ಮಧ್ಯಾಹ್ನ ಮಹಾಪೂಜೆಯ ನಂತರ ಸಾರ್ವಜನಿಕರಿಗೆ ಅನ್ನಸಂತರ್ಪಣೆ, ಬಳಿಕ ಸಾಯಂಕಾಲ ಕೇಶವ ಗೌಡ ಕಲ್ಲದಂಬೆಯವರು ದೀಪ ಬೆಳಗಿಸುವ ಮೂಲಕ ಪ್ರಾರಂಭವಾದ ಭಜನಾ ಕಾರ್ಯಕ್ರಮ ರಾತ್ರಿ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಂತರ ಭಕ್ತರಿಗೆ ಫಲಹಾರ ನಡೆದು ಬೆಳಿಗ್ಗೆ ಮಹಾಮಂಗಳಾರತಿ ವರೆಗೆ ಶಿವರಾತ್ರಿ ಆಚರಣೆ ನಡೆಯಿತು.
ಈ ಸದರ್ಭದಲ್ಲಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ ರಾವ್, ಕಾರ್ಯದರ್ಶಿ ಕುಸುಮಾಕರ್, ಕೋಶಧಿಕಾರಿ ಕೇಶವ ಗೌಡ ಹಾಗೂ ಸದಸ್ಯರುಗಳು ಮತ್ತು ಅಪಾರ ಭಕ್ತ ವೃಂದ ಉಪಸ್ಥಿತರಿದ್ದರು.