ಮಡಂತ್ಯಾರು: ಬಂಗೇರಕಟ್ಟೆ-ನೆತ್ತರ ರಸ್ತೆಯ ದುರಸ್ತಿಯ ಬಗ್ಗೆ ಕಾಲ್ನಡಿಗೆಯಲ್ಲಿ ಪ್ರತಿಭಟನೆ

0

ಮಡಂತ್ಯಾರು: ಮಚ್ಚಿನ ಭಾಗ್ಯಶ್ರೀ ಮಿತ್ರ ಮಂಡಳಿ ನೆತ್ತರ ಹಾಗೂ ಊರ ಗ್ರಾಮಸ್ಥರಿಂದ ಬಂಗೇರಕಟ್ಟೆ ನೆತ್ತರ ರಸ್ತೆಯ ದುರಸ್ತಿಯ ಬಗ್ಗೆ ಕಾಲ್ನಡಿಗೆಯಯಲ್ಲಿ ಪ್ರತಿಭಟನೆ ಮಾ.12ರಂದು ನಡೆಯಿತು.

ಮಚ್ಚಿನ ಗ್ರಾಮ ಪಂಚಾಯತ್ ಹಾಗೂ ಮಡಂತ್ಯಾರು ಗ್ರಾಮ ಪಂಚಾಯತ್ ಗೆ ಸೇರಿದ ಬಂಗೇರಕಟ್ಟೆ ನೆತ್ತರ ಜಂಟಿ ರಸ್ತೆಯು ತೀರ ಅದಕ್ಕೆಟ್ಟಿದ್ದು ಸಂಚಾರಕ್ಕೆ ಕಷ್ಟದ ಸ್ಥಿತಿಯಲ್ಲಿ ಇರುವ ಈ ರಸ್ತೆಯು ದುರಸ್ತಿ ಹಾಗೂ ಡಾಮಾರಿಕರಣಕ್ಕೆ.ದಾರಿದೀಪ ಚರಂಡಿ ದುರಸ್ತಿಗಳ ಬಗ್ಗೆ ಭಾಗ್ಯಶ್ರೀ ಮಿತ್ರ ಮಂಡಳಿ ಹಾಗೂ ಊರವರಿಂದ ನೆತ್ತರದಿಂದ ಮಚ್ಚಿನ, ಮಡಂತ್ಯಾರು ಗ್ರಾಮ ಪಂಚಾಯತಿಗಳಿಗೆ ಕಾಲ್ನಡಿಗೆಯ ಮೂಲಕ ಉಗ್ರ ಪ್ರತಿಭಟನೆ ನಡೆಯಿತು.

ಭರವಸೆ ಒಂದೇ ಸಾಲದು ಅಭಿವೃದ್ಧಿಯೆಂದು ಸ್ವಾಮಿ?. ಕಣ್ಣು ಮುಚ್ಚಿ ಕೂತಿರುವ ಎರಡು ಗ್ರಾಮ ಪಂಚಾಯಿತಿಗಳ-ಜನಪ್ರತಿನಿಧಿಗಳ ಕಣ್ಣು ತೆರೆಯಲು ಈ ನಮ್ಮ ಪ್ರತಿಭಟನೆ.ಮನವಿಗೆ ಲೆಕ್ಕಿಸದ ಗ್ರಾಮ ಪಂಚಾಯಿತಿಗಳಿಗೆ ಬೆವರು ಸುರಿಸಿ ಕಾಲ್ನಡಿಗೆಯ ಈ ನಮ್ಮ ಪ್ರತಿಭಟನೆ.

ಇದಕ್ಕೂ ಲೆಕ್ಕಿಸದೆ ಇದ್ದಲ್ಲಿ ರಕ್ತಸುರಿಸಿ ಪ್ರತಿಭಟನೆ ನಡೆಸುತ್ತೇವೆ ಚುನಾವಣೆಗೆ ಮುನ್ನ ರಸ್ತೆಯ ಅಭಿವೃದ್ಧಿ ನಡೆಸದೆ ಇದ್ದಲ್ಲಿ ಸಂಘ ಸಂಸ್ಥೆ ಊರವರಿಂದ ಉಗ್ರ ಹೋರಾಟ ನಡೆಸುತ್ತೇವೆ ಎಂದು ಮನವಿ ಹಾಗೂ ಬ್ಯಾನರ್ ಗಳನ್ನು ಅಳವಡಿಸಲಾಯಿತು.ತಮ್ಮ ಮನವಿಯನ್ನು ಮಚ್ಚಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೌರಿಶಂಕರಿಗೆ ಹಾಗೂ ಮಡಂತ್ಯಾರು ಗ್ರಾಮ ಪಂಚಯತ್ ಅಧ್ಯಕ್ಷರಿಗೆ ಮನವಿ ನೀಡಿದರು.

ಮಡಂತ್ಯಾರು ಗ್ರಾಮ ಪಂಚಾಯತ್ ಸದಸ್ಯರಾದ ವಿಶ್ವನಾಥ ಪೂಜಾರಿ, ಗೋಪಾಲಕೃಷ್ಣ, ಕಿಶೋರ್ ಶೆಟ್ಟಿ, ಮಚ್ಚಿನ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಮೋದ್ ಕುಮಾರ್, ಭಾಗ್ಯಶ್ರೀ ಮಿತ್ರ ಮಂಡಳಿಯ ಅಧ್ಯಕ್ಷ ಸಂತೋಷ್, ಕಾರ್ಯದರ್ಶಿ ಪ್ರಮೋದ್ ಕೋಡಿ, ಮಹಾಬಲ ನೆತ್ತರ, ಗೋಪಾಲ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ಕೃಷ್ಣಪ್ಪ ಪೂಜಾರಿ, ಮಾನ್ಯ ಶಿವಪ್ಪ ಪೂಜಾರಿ, ಸದಸ್ಯರು ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here