

ಗುರುವಾಯನಕೆರೆ: ಇಲ್ಲಿನ ಶಕ್ತಿನಗರದ ಬಳಿ ವೇಣೂರಿನ ಖಾಸಗಿ ವಿದ್ಯಾಸಂಸ್ಥೆಯ ವಾಹನ ಮತ್ತು ಕಾರ್ ನಡುವೆ ಡಿಕ್ಕಿಯಾಗಿದೆ.
ಕಾರು ಡಿವೈಡರ್ ಮೇಲಿದೆ, ಶಾಲಾ ವಾಹನದಲ್ಲಿ ಮಕ್ಕಳಿದ್ದರು.

ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗಿಲ್ಲ ಅನ್ನುವ ಮಾಹಿತಿ ಸಿಕ್ಕಿದೆ.
ಸ್ಥಳಕ್ಕೆ ಸಂಚಾರಿ ಇಲಾಖೆಯ ಅಧಿಕಾರಿಗಳು ಬಂದಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.