ಬೆಳ್ತಂಗಡಿ: ಲಯನ್ಸ್ ಕ್ಲಬ್ ನಲ್ಲಿ ನಡೆದ ಮಾಜಿ ರಾಜ್ಯಪಾಲರ ದಿನಾಚರಣೆ ಹಾಗೂ ಕ್ಲಬ್ಬಿಗೆ ಸೇರ್ಪಡೆಯಾದ ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಅವರು ಮಾತನಾಡುತ್ತಿದ್ದರು.
ಬೆಳ್ತಂಗಡಿಗೆ 2019ರಲ್ಲಿ ನೆರೆ ಬಂದಿದ್ದಾಗ ಮತ್ತು 2020ರಲ್ಲಿ ಕೋವಿಡ್ ಮಹಾಮಾರಿ ಅಪ್ಪಳಿಸಿದಾಗ ನಾನು ಜಿಲ್ಲೆಯ ರಾಜ್ಯಪಾಲನಾಗಿದ್ದೆ.ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಕೋರಿಕೆ ಸಲ್ಲಿಸಿದ 8 ಗಂಟೆಯಲ್ಲೇ ಲಯನ್ಸ್ ಇಂಟರ್ನ್ಯಾಷನಲ್ ಫಂಡ್ ನಿಂದ (ಎಲ್.ಸಿ.ಎಫ್) ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ 9ಲಕ್ಷ ರೂ.ವೆಚ್ಚದಲ್ಲಿ ವೆಂಟಿಲೇಟರ್ ಯಂತ್ರ ನೀಡಲು ಸಾಧ್ಯವಾದದ್ದು ನಮ್ಮ ಸೇವಾ ಸಂಸ್ಥೆಯ ಸಾಧನೆ.ಅದು ಇಂದಿಗೂ ಸುಸ್ಥಿತಿಯಲ್ಲಿದ್ದು ಜನತೆಗೆ ಸದ್ಬಳಕೆಯಾಗುತ್ತಿದೆ ಎಂದು ನೆನಪಿಸಿಕೊಂಡರು.
ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ವರ್ಷದ ಅಧ್ಯಕ್ಷ ಉಮೇಶ್ ಶೆಟ್ಟಿ ವಹಿಸಿದ್ದರು.ವಿಶೇಷ ಅತಿಥಿಯಾಗಿ ಪ್ರಾಂತ್ಯಾಧ್ಯಕ್ಷ ಹೆರಾಲ್ಡ್ ತಾವ್ರೋ ಭಾಗಿಯಾಗಿದ್ದರು.ತಾಲೂಕು ಕೋಶಾಧಿಕಾರಿ ಸುಭಾಷಿಣಿ ನೂತನ ಸದಸ್ಯರ ಪರಿಚಯ ವಾಚಿಸಿದರು.
ವಸಂತ ಶೆಟ್ಟಿ ರೊನಾಲ್ಡ್ ಅವರನ್ನು ಸಭೆಗೆ ಪರಿಚಯಿಸಿದರು.ನಿಕಟಪೂರ್ವ ಅಧ್ಯಕ್ಷ ಡಾ.ದೇವಿಪ್ರಸಾದ್ ಬೊಳ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹೊಸ ಸದಸ್ಯರಿಗೆ ಪ್ರಮಾಣ ವಚನ ಇದೇ ಸಂದರ್ಭ ಲಯನ್ಸ್ ಇಂಟರ್ನ್ಯಾಷನಲ್ ಮೆಂಬರ್ಷಿಪ್ ಗ್ರೋತ್ ನಡಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಹೊಸದಾಗಿ ಸೇರಿದ ಎಂ.ಪಿ ತಂಗಚ್ಚನ್ ಧರ್ಮಸ್ಥಳ, ಸುಂದರಿ ಎ., ದೇವರಾಜ್, ಹೇಮಲತಾ, ಭಾರತಿ, ಸುನೀತಾ ಮತ್ತು ಮಂಜುನಾಥ ನಾಯಕ್ ಕುಂಬ್ಲೆ ಇವರಿಗೆ ಮಾಜಿ ರಾಜ್ಯಪಾಲರು ಪ್ರಮಾಣವಚನ ಬೋಧಿಸಿದರು.
ಲಯನ್ಸ್ ಶಾಶ್ವತ ಯೋಜನೆಗೆ ದೇಣಿಗೆಯ ಚೆಕ್ ಸ್ವೀಕರಿಸಲಾಯಿತು.
ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳೆಂಜ ಪ್ರಾರ್ಥಿಸಿದರು. ಅಶ್ರಫ್ ಆಲಿಕುಂಞಿ ಮುಂಡಾಜೆ ಧ್ವಜವಂದನೆ ಹಾಗೂ ಬಿ.ಪಿ ಅಶೋಕ್ ನೀತಿ ಸಂಹಿತೆ ವಾಚಿಸಿದರು. ಕೆ ಕೃಷ್ಣ ಆಚಾರ್ ಕಾರ್ಯಕ್ರಮ ನಿರೂಪಿಸಿ, ಕ್ಲಬ್ ಕಾರ್ಯದರ್ಶಿ ಅನಂತಕೃಷ್ಣ ಧನ್ಯವಾದವಿತ್ತರು.