

ಶಿಬರಾಜೆ: ಶ್ರೀ ದುರ್ಗಾ ಕ್ರೀಡಾ ಸಮಿತಿ ಕಳೆಂಜ ಮತ್ತು ಗ್ರಾಮಭ್ಯೋದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಪಾದೆ ಇವರ ಸಹಭಾಗಿತ್ವದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ದುರ್ಗಾ ಟ್ರೋಫಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವನ್ನು ಬಾಬು ಗೌಡ ಎಣ್ಣೆಗದ್ದೆ ರವರು ಉದ್ಘಾಟಿಸಿದರು.

ಸಮಾರೋಪ ಸಮಾರಂಭ ಇಂದು ಮಾ.9ರಂದು ಸಂಜೆ 6 ಗಂಟೆಗೆ ನಡೆಯಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಕ್ರೀಡೆ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ಒಳಗುಡ್ಡೆ, ಮುಖ್ಯ ಅತಿಥಿಗಳಾಗಿ ಪಂಚಾಯತ್ ಅಧ್ಯಕ್ಷೆ ಗಿರಿಜಾ, ಉಪಾಧ್ಯಕ್ಷ ಮಂಜುನಾಥ ಗೌಡ, ಸದಸ್ಯರಾದ ಟಿ ಎಸ್ ನಿತ್ಯಾನಂದ ರೈ, ಪ್ರೇಮ ಬಿ ಎಸ್, ಅರಣ್ಯ ಸಮಿತಿ ಅಧ್ಯಕ್ಷ ಧನಂಜಯ್ ಗೌಡ, ಜೆ.ಸಿ ಕೊಕ್ಕಡ ಕಪಿಲ ಘಟಕದ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ಗ್ರಾಮಭ್ಯತೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಸಬಾಸ್ಟಿನ್, ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜ ಅಧ್ಯಕ್ಷ ಕೆ ಶ್ರೀಧರ್ ರಾವ್ ಭಾಗವಹಿಸಲಿದ್ದಾರೆ.