ಹೋಲಿ ರಿಡೀಮರ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ.ವೋಲ್ಟರ್ ಡಿಮೆಲ್ಲೋರವರ ಹುಟ್ಟುಹಬ್ಬ ಆಚರಣೆ

0

ಬೆಳ್ತಂಗಡಿ: ಹೋಲಿ ರಿಡೀಮರ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ.ವೋಲ್ಟರ್ ಡಿಮೆಲ್ಲೋರವರ 69ನೇ ಹುಟ್ಟುಹಬ್ಬವನ್ನು ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕೇಕ್ ಕತ್ತರಿಸಿ ಶುಭಾಶಯ ಗೀತೆಯನ್ನು ಹಾಡುವ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಲಾಯಿತು.

ಸಹಶಿಕ್ಷಕಿ ಶ್ರೀಮತಿ ಪ್ರೀತ ಡಿಸೋಜ ಸಂಚಾಲಕರ ಕುರಿತು ಮಾತನಾಡಿದರು.ಶಾಲಾ ಮುಖ್ಯೋಪಾಧ್ಯಾಯ ಫಾ.ಕ್ಲಿಫರ್ಡ್ ಪಿಂಟೋರವರು ಹಿರಿಯರ ಜೀವನಾನುಭವ, ಜೀವನೋತ್ಸಾಹಗಳು ನಮಗೆ ದಾರಿದೀಪವಿದ್ದಂತೆ.

ಅವರ ಮಾರ್ಗದರ್ಶನದಲ್ಲಿ ನಮ್ಮ ಸಂಸ್ಥೆಯು ಇನ್ನಷ್ಟು ಬೆಳಗಲಿ ಎಂದು ನುಡಿದು ಶುಭ ಹಾರೈಸಿದರು.

ವಿದ್ಯಾರ್ಥಿನಿಯರಾದ ಅಲೀನ ಮತ್ತು ಜಾನಿಸ್ ಬೆನ್ನಿಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here