

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಯಿತು.
ಶಾಲಾ ಸಂಚಾಲಕ ಅತಿ ವಂದನೀಯ ಫಾ.ವೋಲ್ಟರ್ ಡಿಮೆಲ್ಲೋ ರವರು ವಿದ್ಯಾರ್ಥಿಗಳ ಬದುಕಿನಲ್ಲಿ ಇದೊಂದು ಮಹತ್ವದ ಘಟ್ಟವಾದ್ದರಿಂದ ಕಲಿಕೆಯ ಕಡೆಗೆ ಮಾತ್ರ ಹೆಚ್ಚಿನ ಗಮನಹರಿಸಿ ಉತ್ತಮ ಅಂಕ ಗಳಿಸಿದರೆ ಮುಂದಿನ ಭವಿಷ್ಯವು ಖಂಡಿತವಾಗಿಯೂ ನೀವು ಬಯಸಿದಂತೆ ಉಜ್ವಲವಾಗಿರುತ್ತದೆ ಎಂದು ನುಡಿದು ಶುಭ ಆಶೀರ್ವದಿಸಿದರು.

ಶಾಲಾ ಮುಖ್ಯೋಪಾಧ್ಯಾಯ ವಂ ಫಾ ಕ್ಲಿಫರ್ಡ್ ಪಿಂಟೋರವರು ಮಾತನಾಡುತ್ತಾ ಸತತ ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆಯ ಪಥವನ್ನು ಏರಲು ಸಾಧ್ಯ ಎಂದು ಕಿವಿಮಾತು ನೀಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದರು.
ವಿದ್ಯಾರ್ಥಿನಿಯರಾದ ರೀಶೆಲ್ ಬೆನ್ನಿಸ್ ಮತ್ತು ನಿಜ ತಮ್ಮ ಶಾಲಾ ದಿನಗಳ ಸವಿನೆನಪುಗಳನ್ನು ಹಂಚಿಕೊಂಡರು.ಸಹ ಶಿಕ್ಷಕಿ ಬ್ಲೆಂಡಿನ್ ರೋಡ್ರಿಗಸ್ ರವರು ವಿದ್ಯಾರ್ಥಿಗಳಿಗೆ ಶುಭನುಡಿಗಳನ್ನಾಡಿದರು.ಒಂಬತ್ತನೇ ತರಗತಿಯ ವಿದ್ಯಾರ್ಥಿಗಳು ಶುಭಾಶಯ ಗೀತೆಯನ್ನು ಹಾಡಿದರು ಮತ್ತು ನೃತ್ಯಗಳ ಮೂಲಕ ಎಲ್ಲರ ಮನರಂಜಿಸಿದರು.

ಮೌಲ್ಯಶಿಕ್ಷಣ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ಹಾಗೂ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು ಮತ್ತು ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯಾಗಿ ಸ್ಮರಣಿಕೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಸುಪ್ರಿಯಾ ಡಿಸೋಜ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಫಾತಿಮಾ ಸನ ಸ್ವಾಗತಿಸಿ, ಸಫೀದಾ ವಂದಿಸಿದರು. ವಿದ್ಯಾರ್ಥಿನಿಯರಾದ ಅಲೀನ ಮತ್ತು ಜಾನಿಸ್ ಬೆನ್ನಿಸ್ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿಯರಾದ ಸರಿತಾ ರೊಡ್ರಿಗಸ್ ಮತ್ತು ಪ್ರಭಾ ಗೌಡ ಸಹಕರಿಸಿದರು.
