ಸುಲ್ಕೇರಿಮೊಗ್ರು: ಟೀಂ ಅಭಯಹಸ್ತ ವತಿಯಿಂದ ಸರ್ಕಾರಿ ಶಾಲೆಗೆ ಆರ್ಥಿಕ ಸಹಕಾರದ ಹಸ್ತಾಂತರ-ಬಹುಮಾನ ವಿತರಣೆ

0

ಸುಲ್ಕೇರಿಮೊಗ್ರು: ಸೇವೆ ಸಂಘಟನೆ ಸಾಮರಸ್ಯದ ಧ್ಯೇಯದೊಂದಿಗೆ ಏಳು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಪ್ರತಿಷ್ಠಿತ ಟೀಂ ಅಭಯಹಸ್ತ ಚ್ಯಾರಿಟೇಬಲ್ ಸ್ಪೋರ್ಟ್ಸ್ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಲ್ಕೇರಿಮೊಗ್ರು ಇಲ್ಲಿನ ಅಗತ್ಯತೆಗೆ ಪೂರಕವಾಗಿ ಆರ್ಥಿಕ ಸಹಕಾರವನ್ನು ಈ ದಿನ ಹಸ್ತಾಂತರ ಮಾಡಲಾಯಿತು ಹಾಗೂ ಸಂಘಟನೆಯ ವತಿಯಿಂದ ಆಯೋಜಿಸಲಾಗಿದ್ದ ಸ್ಪರ್ಧಾ ಕಾರ್ಯಕ್ರಮಗಳ ಬಹುಮಾನ ವಿತರಣೆ ಮಾಡಲಾಯಿತು.

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ ಕೊಡಂಗೆ ರವರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಹಸ್ತಾಂತರಿಸಿದರು.ಸಂಘಟನೆಯ ಸಲಹೆಗಾರರಾದ ಉಮೇಶ್ ಸುವರ್ಣ ರವರು ಬಹುಮಾನ ವಿತರಿಸಿದರು.

ಸಭೆಯಲ್ಲಿ ಟೀಂ ಅಭಯಹಸ್ತ ಸಂಘಟನೆಯ ಪ್ರಧಾನ ಸಂಚಾಲಕ ಸಂದೀಪ್ ಎಸ್ ನೀರಲ್ಕೆ, ಎಸ್ ಡಿ ಎಂ ಸಿ ಅಧ್ಯಕ್ಷೆ ರೇವತಿ, ಮುಖ್ಯಶಿಕ್ಷಕ ನಾಗಭೂಷಣ್, ಶಿಕ್ಷಕರಾದ ಸುಬ್ರಹ್ಮಣ್ಯ ಭಟ್, ಶಾಂತಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here