ಪದ್ಮುಂಜ: ಕಣಿಯೂರು ಗ್ರಾಮ ಪಂಚಾಯತ್ ನಲ್ಲಿ ಕರ್ನಾಟಕ ಸರ್ಕಾರದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ನೊಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವಲಂಬಿತರಿಗೆ ಆರೋಗ್ಯ ತಪಾಸಣೆ ಹಾಗೂ ತರಬೇತಿ ಶಿಬಿರ ಮಾ.4ರಂದು ಪದ್ಮುಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರಗಿತು.
ಶಿಬಿರದಲ್ಲಿ 20 ತರದ ರೋಗಗಳ ತಪಾಸಣೆ ಹಾಗೂ ಔಷಧಿ ವಿತರಣೆ ಮಾಡಲಾಯಿತು.
ಕಣಿಯೂರು ಮತ್ತು ಉರುವಾಲು ಗ್ರಾಮದ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು.
ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಕಾರಿಂಜ, ಉಪಾಧ್ಯಕ್ಷೆ ಜಾನಕಿ ಸೇರಿದಂತೆ ಪಂಚಾಯತ್ ಸದಸ್ಯರು ಡಾ.ಸಂಜೈ, ತಂಡದ ನಾಯಕ ರಿತೇಶ್, ಅನನ್ಯ, ರಶ್ಮಿ, ಸಹದ್, ಮೆಲಿಶಾ, ಜೊಯಿಷನ್, ಹರೀಶ, ಅರುಣ್, ವ್ಯವಸ್ಥಾಪಕರಾದ ಬಾಬು ಉಪಸ್ಥಿತರಿದ್ದರು.
p>