ಧರ್ಮಸ್ಥಳ : ಶ್ರೀ ಧ.ಮಂ.ಆಂ.ಮಾ ಶಾಲೆಯಲ್ಲಿ ಕಿಡ್ಸ್ ಪ್ಯಾರಡೈಸ್ ಉದ್ಘಾಟನೆ

0

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಆಟದ ಮನೆಯಾದ ಕಿಡ್ಸ್ ಪ್ಯಾರಡೈಸ್ ಉದ್ಘಾಟನೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ಕಿಡ್ಸ್ ಪ್ಯಾರಡೈಸ್ ಎಂಬ ಹೆಸರಿನ ನಾಮ ಫಲಕ ಅನಾವರಣದೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಿದರು.

ತದನಂತರ ಮಾತನಾಡಿದ ಹರ್ಷೇಂದ್ರ ಕುಮಾರ್ ಅವರು ಆಟ ಆಡುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಗಳ ಸಲಹಾ ಸಮಿತಿಯ ಅಧ್ಯಕ್ಷೆ ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಕ್ಕಳ ಜೊತೆಗೆ ಮಗುವಾಗಿ ಸಂತಸದಿಂದ ಅವರ ಆಟವನ್ನು ಗಮನಿಸುತ್ತಾ ಅವರನ್ನು ಮಾತನಾಡಿಸಿ ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದರು.

ಶಾಲಾ ಮುಖೋಪಾಧ್ಯಾಯಿನಿ ಪರಿಮಳ ಎಂ ವಿ ಸ್ವಾಗತಿಸಿದರು.

ಡಿಎಂಸಿಯ ಮುಖ್ಯ ಇಂಜಿನಿಯರ್ ಯಶೋಧರ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದ ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.

LEAVE A REPLY

Please enter your comment!
Please enter your name here