ಬಂಟರ ತಾಲೂಕು ಮಟ್ಟದ ವಾಲಿಬಾಲ್ ಹಾಗೂ ದಿ.ಅನಿಲ್ ನಾಯ್ಗ ಸ್ಮರಣಾರ್ಥ ಕ್ರೀಡೋತ್ಸವ

0

ಬಳಂಜ: ಬಂಟರ ಗ್ರಾಮ ಸಮಿತಿ ನಾಲ್ಕೂರು, ಕಾರ್ಯಣ ಇದರ ವತಿಯಿಂದ ಬಂಟರ ತಾಲೂಕು ಮಟ್ಟದ ವಾಲಿಬಾಲ್ ಹಾಗೂ ಆರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ದಿ.ಅನಿಲ್ ನಾಯ್ಗ ಟ್ರೋಫಿಯ ಕ್ರೀಡೋತ್ಸವವು ಮಾ.3ರಂದು ಅಟ್ಲಾಜೆ ಶಾಲಾ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮ ವನ್ನು ಮೀನಾಕ್ಷಿ ನಾಯ್ಗ ಅಟ್ಲಾಜೆ ಇವರು ಉದ್ಘಾಟಿಸಿದರು.ಮಧ್ಯಾಹ್ನದ ಸಭಾ ಕಾರ್ಯಕ್ರಮದ ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಗ್ರಾಮ ಸಮಿತಿಯ ಅಧ್ಯಕ್ಷ ಹರೀಶ್ ಶೆಟ್ಟಿ ಕರಂಬಿತ್ತಿಲು ವಹಿಸಿ ಮಾತನಾಡಿ, ಈ ಕ್ರೀಡೋತ್ಸವ ಮಾಡುತ್ತಿರುವುದು ಕೇವಲ ಮನರಂಜನೆಗಲ್ಲ ಸಮುದಾಯದ ಜನರ ಒಟ್ಟು ಸೇರ್ವಿಸಿವಿಕೆ ಗೋಸ್ಕರ ಹಾಗು ಸಮಾಜ ಮುಖಿ ಕಾರ್ಯ ಕ್ರಮ ನಡೆಸುದಕ್ಕಾಗಿ.ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

ಅಲ್ಲದೆ ಬಳಂಜ ಗ್ರಾಮದ ಒಬ್ಬ ಬಡ ಕುಟುಂಬದ ವಿದ್ಯಾರ್ಥಿನಿರ್ಯೋಳ ಶಿಕ್ಷಣ ದ ಸಂಪೂರ್ಣ ಜವಾಬ್ದಾರಿಯನ್ನು ನಮ್ಮ ಬಂಟರ ಗ್ರಾಮ ಸಮಿತಿ ಹೊತ್ತಿಕೊಂಡಿವೆ ಎಂದರು.ಮುಖ್ಯ ಅತಿಥಿ ಗಳಾಗಿ ಚಲನಚಿತ್ರ ಹಾಗು ಕಿರುತೆರೆ ನಿರ್ದೇಶಕ ವಿನು ಬಳಂಜ, ರವೀಂದ್ರ ಶೆಟ್ಟಿ ಬಳಂಜ, ಸಂಜೀವ ಶೆಟ್ಟಿ ಕುಂಠಿನಿ, ಸುರೇಶ್ ಶೆಟ್ಟಿ ಲಾಯಿಲ, ದೇವಿ ಪ್ರಸಾದ್ ಶೆಟ್ಟಿ ಬಿರ್ಮನೊಟ್ಟು, ಶೋಭಾ.ವಿ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರ ಗಳಲ್ಲಿ ಗುರುತಿಸಿಕೊಂಡಿರುವ,ಕರ್ನಾಟಕ ಸರ್ಕಾರದ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಬೆಳ್ತಂಗಡಿ ಮಂಜುಶ್ರೀ ಹಾಗು ಜೆ. ಸಿ. ಐ. ನ ಅಧ್ಯಕ್ಷರಾಗಿ, ಅಖಿಲ ಭಾರತ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾಗಿ ಪ್ರಸ್ತುತ ಕರಾವಳಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ನ ಅಧ್ಯಕ್ಷ ರಾಗಿ ಸೇವೆ ಸಲ್ಲಿಸುತ್ತಿರುವ ರವೀಂದ್ರ ಶೆಟ್ಟಿ ಬಳಂಜ, ಕೃಷಿಕರಾಗಿರುವ ನಾಲ್ಕುರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲುಸುತ್ತಿರುವ ವಸಂತಶೆಟ್ಟಿ ಮಜಲು, ವೃತ್ತಿ ಯಲ್ಲಿ ಛಾಯಾ ಚಿತ್ರಗಾರರಾಗಿರುವ, ಪ್ರಸ್ತುತ ಬೆಳ್ತಂಗಡಿ ಮೀಡಿಯಾ ಕ್ಲಬ್ ನ ಅಧ್ಯಕ್ಷ ರಾಗಿರುವ ಬಾಲಕೃಷ್ಣ ಶೆಟ್ಟಿ ನೇಸರ,
ಬಳಂಜ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾಗಿರುವ, ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ ಇದರ ಮಾಜಿ ಅಧ್ಯಕ್ಷರಾಗಿರುವ ಹಾಗೂ ಹಲವಾರು ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಯಶೋಧರ್ ಶೆಟ್ಟಿ ಅಟ್ಲಾಜೆ, ನಾಲ್ಕೂರು ಕಂಚಿನಡ್ಕ ಶ್ರೀ ಮೂಜಿಲ್ನಾಯ ಹಾಗು ಪರಿವಾರ ದೈವ ಕ್ಷೇತ್ರ ದ ಇಲ್ಲಿನ ಪ್ರಸ್ತುತ ಅಧ್ಯಕ್ಷ ರಾಗಿರುವ ವಿನಯ ಶೆಟ್ಟಿ ಯೈಕುರಿ ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮಕ್ಕಳಿಗೆ ಲಿಂಬೆಹುಳಿ ಚಮಚ ಓಟ, ಬಾಲ್ ಪಾಸಿಂಗ್, ಲಕ್ಕಿ ಗೇಮ್, ಗೋಣಿಚೀಲ ಓಟ, ಸೂಜಿ ನೂಲು ಸ್ಪರ್ಧೆ, ಮಹಿಳೆಯರಿಗೆ ತ್ರೋಬಾಲ್, ಗುಂಡೆಸೆತ, ಸಂಗೀತ ಕುರ್ಚಿ, ಹಗ್ಗ ಜಗ್ಗಾಟ , ಪುರುಷರಿಗೆ ಗುಂಡೆಸೆತ, ವಾಲಿಬಾಲ್, ಹಗ್ಗ ಜಗ್ಗಾಟ ಹಾಗು ಪುರುಷರಿಗೆ ಸೂಜಿಗೆ ನೂಲು ಹಾಕುವ ಸ್ಪರ್ಧೆ ಹಾಗು ವಿವಿಧ ಸ್ಪರ್ಧೆ ಜರಗಿತು.

ಈ ಕ್ರೀಡೋತ್ಸವಕ್ಕೆ ಗಣ್ಯ ಅತಿಥಿಗಳು ಬಂದು ಶುಭ ಹಾರೈಸಿದರು.

ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ವಿಜೇತ ರಿಗೆ ಬಹುಮಾನ ವಿತರಣೆ ನಡೆಯಿತು ಸಮಾರಂಭ ದಲ್ಲಿ ಸಮಿತಿ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕರಂಬಿತ್ತಿಲು, ಸತೀಶ್ ರೈ ಬಾರ್ದಡ್ಕ, ನವೀನ್ ಶೆಟ್ಟಿ ಸಾಮಾನಿ ಕರಂಬಾರು, ಪ್ರಶಾಂತ್ ಶೆಟ್ಟಿ ಕರಂಬಾರು, ವಿನು ಬಳಂಜ, ರಾಜೇಂದ್ರ ಶೆಟ್ಟಿ ಕುರೆಲ್ಯ, ವಸಂತ ಶೆಟ್ಟಿ ಮಜಲು ಅಜಿತ್ ರೈ ಅನಿಲ್ ಶೆಟ್ಟಿ, ಕಾರ್ಯದರ್ಶಿ ಅಶೋಕ್ ಶೆಟ್ಟಿ ಪೊಸಮಾರ್, ಸದಾಶಿವ ಶೆಟ್ಟಿ ತಾರೀದೊಟ್ಟು ಸಮಿತಿ ಯ ಎಲ್ಲಾ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಭಾಸ್ಕರ್ ಶೆಟ್ಟಿ ಕಾರ್ಯಾಣ ಹಾಗು ಹರೀಶ್ ಶೆಟ್ಟಿ ಕುಪ್ಪೆಟ್ಟಿ ನಿರೂಪಿಸಿದರು.

LEAVE A REPLY

Please enter your comment!
Please enter your name here