ಬುರೂಜ್: ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ

0

ಬುರೂಜ್: ಬುರೂಜ್ ಹೈಸ್ಕೂಲ್ ರಝಾನಗರ ಕಲಾಬಾಗಿಲು ಬಂಟ್ವಾಳ ಇಲ್ಲಿ 5 ವರುಷದ ಕೆಳಗಿನ ಮಕ್ಕಳಿಗೆ ಪೋಲಿಯೊ ಲಸಿಕಾ ಕಾರ್ಯಕ್ರಮ ಇವತ್ತು ನಡೆಸಲಾಯಿತು.

ಶಾಲಾ ಸಂಚಾಲಕರಾದ ಜನಾಬ್ ಶೇಕ್ ರಹ್ಮತ್ತುಲ್ಲಾಹ್ ಇವರು ನರ್ವಲ್ದಡ್ಡ ಜಗದೀಶ್ ರವರ ಉಪಸ್ಥಿತಿಯಲ್ಲಿ ಅವರ ಮಕ್ಕಳಾದ ದಕ್ಷ್ ಮತ್ತು ದಿಶಾ ರವರಿಗೆ ಪೊಲಿಯೋ ಹನಿ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರಾದ ವನಿತಾ ಶೆಟ್ಟಿ, ಖುರ್ಷಿದ್, ಮುಖ್ಯೋಪಾಧ್ಯಾಯರಾದ ಜಯಶ್ರೀ ಸಾಲ್ಯಾನ್, ಚಂದ್ರಾವತಿ, ರೂಹಿ ಮತ್ತು ರಝಿಯಾ ಎಸ್.ಪಿ. ಉಪಸ್ಥಿತರಿದ್ದರು.

ಬುರೂಜ್ ಖಾಸಗಿ ಶಾಲೆಯಲ್ಲಿ ಶಿಕ್ಷಣದ ಜೊತೆ ಸಾಮಾಜಿಕ ಹೊಣೆ ಈ ಕಾರ್ಯಕ್ರಮದಡಿಯಲ್ಲಿ ಸುಮಾರು 24 ವರುಷಗಳಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

LEAVE A REPLY

Please enter your comment!
Please enter your name here