ಉಜಿರೆ: ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಾಲಿಬಾಲ್ ಕ್ರೀಡಾ ಕೂಟ

0

ಉಜಿರೆ: ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು) ರಾಜ್ಯ ಮಟ್ಟದ ಮತ್ತು ಮಂಗಳೂರು ವಲಯದ ವಾಲಿಬಾಲ್ ಕ್ರೀಡಾಕೂಟ ಫೆ.22 ಮತ್ತು ಫೆ.23ರಂದು ಅಯೋಜಿಸಲಾಗಿತ್ತು.

ಕ್ರೀಡಾಕೂಟದ ಫಲಿತಾಂಶದ ಇಂತಿದೆ: ಮಂಗಳೂರು ವಲಯ ವಿಜೇತರು: ಪ್ರಥಮ ಸ್ಥಾನ: ಸಹ್ಯಾದ್ರಿ ಇಂಜಿನಿಯರಿಂಗ್‌ ಕಾಲೇಜು ಮಂಗಳೂರು, ದ್ವಿತೀಯ ಸ್ಥಾನ: ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜ್ ಪುತ್ತೂರು,

ರಾಜ್ಯ ಮಟ್ಟ ವಿಜೇತರು: ಪ್ರಥಮ ಸ್ಥಾನ: R.V ಇಂಜಿನಿಯರಿಂಗ್‌ ಕಾಲೇಜ್ ಬೆಂಗಳೂರು, ದ್ವಿತೀಯ ಸ್ಥಾನ: ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜ್ ಪುತ್ತೂರು, ತೃತೀಯ ಸ್ಥಾನ: ಮಲೆನಾಡು ಇಂಜಿನಿಯರಿಂಗ್‌ ಕಾಲೇಜ್ ಹಾಸನ.

ಕಾಲೇಜಿನ ಪ್ರಾಂಶುಪಾಲ ಡಾ.ಅಶೋಕ್ ಕುಮಾರ್ ಬಹುಮಾನ ವಿತರಸಿ ಅಭಿನಂದಿಸಿದರು.ದೈಹಿಕ ಶಿಕ್ಷಣ ನಿರ್ದೇಶಕ ಪ್ರಭಾಕರ್, ಕ್ರೀಡಾ ಸಲಹೆಗಾರ ಡಾ.ರವೀಶ್, ಸಹ ಪ್ರಾದ್ಯಾಪಕ ಡಾ.ಬಸವ, ಡಾ.ಭರತ್‌ರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಇಂಜಿನಿಯರಿಂಗ್ ಕಾಲೇಜುಗಳ 15 ತಂಡಗಳು ಮತ್ತು ವಲಯ ಮಟ್ಟದಲ್ಲಿ 18 ತಂಡಗಳು ಪಾಲ್ಗೊಂಡವು.

ವಿದ್ಯಾರ್ಥಿಗಳಾದ ಶ್ರುತ ಸ್ವಾಗತಿಸಿ, ಸಹನಾ ವಂದಿಸಿದರು. ಪೂರ್ಣಿಮಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here