ಬೆಳ್ತಂಗಡಿಯಲ್ಲಿ ಮತದಾರ ಸಾಕ್ಷರತ ಸಂಘ ರಾಯಭಾರಿಗಳ ತರಬೇತಿ ಕಾರ್ಯಾಗಾರ

0

ಬೆಳ್ತಂಗಡಿ: ಪ್ರಜಾಪ್ರಭುತ್ವ ಬಲಿಷ್ಠಗೊಳಿಸುವಲ್ಲಿ ಯುವ ಮತದಾರರ ಪಾತ್ರ ಬಹಳ ಮುಖ್ಯ ಎಂದು ಬೆಳ್ತಂಗಡಿ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಹಾಗೂ ತಾ.ಸ್ವೀಪ್ ಸಮಿತಿಯ ಅಧ್ಯಕ್ಷ ಭವಾನಿ ಶಂಕರ್ ಹೇಳಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಫೆ.29ರಂದು ದ.ಕ.ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ ಮತ್ತು ಬೆಳ್ತಂಗಡಿ ತಾಲೂಕು ಸ್ವೀಪ್ ಸಮಿತಿಯ ಸಹಯೋಗದಲ್ಲಿ ಮತದಾರರ ಸಾಕ್ಷರತಾ ಸಂಘಗಳ ರಾಯಭಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಭವಿಷ್ಯದ ಮತದಾರರು ಹಾಗೂ ಯುವ ಮತದಾರರು ಜಾಗೃತರಾಗಿ ಇತರರಿಗೂ ಜಾಗೃತಿ ಮೂಡಿಸುತ್ತಾ ಮುನ್ನಡೆದರೆ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಲು ಸಾಧ್ಯ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಮಾತನಾಡಿ ಮತದಾರರ ಸಾಕ್ಷರತಾ ಸಂಘಗಳಲ್ಲಿ ರಾಯಭಾರಿಗಳಾದ ತಾವೆಲ್ಲರೂ ತಮ್ಮ ಕಾಲೇಜುಗಳ ಎಲ್ಲಾ ಸ್ನೇಹಿತರು ಹಾಗೂ ಅವರ ಕುಟುಂಬದವರು ಕಡ್ಡಾಯವಾಗಿ ಮತದಾನ ಮಾಡುವಲ್ಲಿ ಪ್ರೇರೇಪಕರಾಗಬೇಕೆಂದು ತಿಳಿಸಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸ್ವೀಪ್ ಸಮಿತಿಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಯೋಗೇಶ ಹೆಚ್.ಆರ್ ತಾಲೂಕು ಸ್ವೀಪ್ ಸಮಿತಿಯು ಈ ಬಾರಿ ತರಬೇತಿ ನೀಡಲು ಮಾಡಿಕೊಟ್ಟಿರುವ ಅತ್ಯುತ್ತಮ ವ್ಯವಸ್ಥೆಗಳಿಗಾಗಿ ತಾ.ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾ.ಸಂಪನ್ಮೂಲ ವ್ಯಕ್ತಿಗಳಾದ ದಿವ್ಯಾ ಕುಮಾರಿ, ಶುಭ ಕೆ., ರವಿಕುಮಾರ್ ಬಿ.ಆರ್ ಹಾಗೂ ತಾ.ಪಂ ನ ವ್ಯವಸ್ಥಾಪಕರಾದ ಪ್ರಶಾಂತ್ ಡಿ. ಪಿಡಿಒ ಅಶೋಕ್ ದೇವಾಡಿಗ, ಸಹಾಯಕ ಲೆಕ್ಕಾಧಿಕಾರಿ ಗಣೇಶ್ ಹಾಗೂ ತಾಲೂಕಿನ ವಿವಿಧ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಇ ಎಲ್ ಸಿ ರಾಯಭಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here