ಗ್ರಾಮ ಆಡಳಿತ ಅಧಿಕಾರಿ (ವಿ.ಎ.ಓ) ನೇಮಕಾತಿ ಪರೀಕ್ಷೆ ತಯಾರಿಗೆ ವಿದ್ಯಾಮಾತಾದಿಂದ ತರಬೇತಿ

0

ಪುತ್ತೂರು: ರಾಜ್ಯ ಕಂದಾಯ ಇಲಾಖೆಯಿಂದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನೇಮಕಾತಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಅತೀ ಶೀಘ್ರವೇ ರಾಜ್ಯದಲ್ಲಿ ಒಂದು ಸಾವಿರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಸುಮಾರು 50 ಹುದ್ದೆಗಳು ಭರ್ತಿಯಾಗಲಿದೆ.

ಬುದ್ದಿವಂತರ ಜಿಲ್ಲೆಯೆಂದೇ ಕರೆಸಿಕೊಳ್ಳುವ ದಕ್ಷಿಣ ಕನ್ನಡವೂ ಕೂಡ ಅತೀ ಹೆಚ್ಚು ಸರಕಾರಿ ಹುದ್ದೆಗಳನ್ನು ಅಲಂಕರಿಸಬೇಕೆಂದು ವಿದ್ಯಾಮಾತಾ ಅಕಾಡೆಮಿಯ ಆಶಯವಾಗಿದ್ದು, ಯುವ ಜನರ ಸುಂದರ ಕನಸ್ಸುಗಳನ್ನು ಸಾಕಾರಗೊಳಿಸೋ, ಅವರ ಭವ್ಯ ಭವಿಷ್ಯವನ್ನು ಸುಭದ್ರಗೊಳಿಸುವ, ಮತ್ತಷ್ಟೂ ಧೈರ್ಯ, ಪ್ರೋತ್ಸಾಹವನ್ನು ತುಂಬಿ, ಸರಕಾರಿ ಸಹಿತ ಖಾಸಗಿ ರಂಗದಲ್ಲೂ ಅವರು ಉದ್ಯೋಗ ಗಿಟ್ಟಿಸಿಕೊಳ್ಳುವಂತಾಗಲು ವಿದ್ಯಾಮಾತಾವು ಸದಾ ಭರವಸೆಯ ಬೆಳಕಾಗಿ ಕಾರ್ಯಗೈಯುತ್ತಿದೆ.

ಗ್ರಾಮ ಆಡಳಿತ ಅಧಿಕಾರಿ ಹುದ್ದೆ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಯ ಪೂರ್ವ ತಯಾರಿ ತರಬೇತಿಯು ನುರಿತ ತಂಡದಿಂದ ಅಕಾಡೆಮಿ ಮೂಲಕ ಆರಂಭವಾಗಲಿದೆ.

ತರಬೇತಿಯು ಮಾ.10ರಿಂದಲೇ ಶುರುವಾಗಲಿದ್ದು, ಆನ್ಲೈನ್ ತರಗತಿಗಳು (ರಾತ್ರಿ 8ರಿಂದ 9) ಮತ್ತು ನೇರ ತರಗತಿಗಳ (ಬೆಳಿಗ್ಗೆ 10ರಿಂದ ಮದ್ಯಾಹ್ನ 1ರವರೆಗೆ) ಮೂಲಕ ನಡೆಯಲಿದೆ.

ತರಬೇತಿಯನ್ನು ಪಡೆಯಲಿಚ್ಚಿಸುವ ಅಭ್ಯರ್ಥಿಗಳು ನೇರವಾಗಿ ವಿದ್ಯಾಮಾತಾ ಅಕಾಡೆಮಿ ಇದರ ಪುತ್ತೂರು ಅಥವಾ ಸುಳ್ಯ ಕಛೇರಿಯನ್ನು ಕೂಡಲೇ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ಅಕಾಡೆಮಿ ಇದರ ಅಧ್ಯಕ್ಷ ಭಾಗ್ಯೇಶ್ ರೈ ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ವಿದ್ಯಾಮಾತಾ ಅಕಾಡೆಮಿ ಪುತ್ತೂರು ಶಾಖೆಯ ದೂರವಾಣಿ 96204 68869, 9148935808 ಅಥವಾ ಸುಳ್ಯ ಶಾಖೆ ದೂರವಾಣಿ 9448527606 ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here