ಇಂದಬೆಟ್ಟು: ಇತಿಹಾಸ ಪ್ರಸಿದ್ಧ ಬಂಗಾಡಿ ಸೀಮೆಯ ಕುತ್ರೊಟ್ಟು ಬಂಗಾಡಿ ಹಾಡಿದೈವ ಉಳ್ಳಾಕುಳ ಕ್ಷೇತ್ರದಲ್ಲಿ ಚಂಡಿಕಾ ಯಾಗ ಹಾಗೂ ವರ್ಷಾವಧಿ ಜಾತ್ರೆ ಮಾ.4ರಿಂದ ಮಾ.7ರವರೆಗೆ ನಡೆಯಲಿದೆ.
ಮಾ.4ರಂದು ಸಾಯಂಕಾಲ 4.30ಕ್ಕೆ ಗ್ರಾಮಸ್ಥರಿಂದ ಹೊರೆಕಾಣಿಕೆ. ರಾತ್ರಿ ಭಂಡಾರ ಆಗಮನ, ತೊಡರಬಲಿ ಉಗ್ರಾಣ ಮುಹೂರ್ತ, ಮಾ.5ರಂದು ಬೆಳಗ್ಗೆ ಉಳ್ಳಾಕುಳ ಸನ್ನಿಧಿಯಲ್ಲಿ ವಕ ಕಲಶ, ಪ್ರಧಾನ ಹೋಮ, ಧ್ವಜಾರೋಹಣ, ಕಲಶಾಭಿಷೇಕ, ಪಂಚಪರ್ವ ಸಂಕ್ರಾಂತಿ 12 ತೆಂಗಿನ ಕಾಯಿಗಳ ಗಣಹೋಮ, ಚಂಡಿಕಾ ಯಾಗ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ. ಅಪರಾಹ್ನ 3ರಿಂದ ಅನ್ನಸಂತರ್ಪಣೆ. ರಾತ್ರಿ 7ರಿಂದ 10ರ ತನಕ ಶ್ರೀ ಉಳ್ಳಾಳ್ತಿ ಸನ್ನಿಧಿಯಲ್ಲಿ ಹೂವಿನ ಪೂಜೆ, ಮಹಾಪೂಜೆ ಹಾಗೂ ರಾತ್ರಿ 11ರಿಂದ ಉಳ್ಳಾಯ-ಉಳ್ಳಾಲ್ತಿ ನೇಮೋತ್ಸವ ಜರುಗಲಿದೆ.
ಮಾ.6ರಂದು ಬೆಳಗ್ಗೆ ಪಂಚಪರ್ವ ಸಂಕ್ರಾಂತಿ, ಶ್ರೀ ನಾಗ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಆಶ್ಲೇಷಾ ಬಲಿ, ನಾಗತಂಬಿಲ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ರಾತ್ರಿ 9ರಿಂದ 10ರ ತನಕ ಉಳ್ಳಾಲ್ತಿ ಸನ್ನಿಧಿಯಲ್ಲಿ ಹೂವಿನ ಪೂಜೆ, ಮಹಾಪೂಜೆ, ರಾತ್ರಿ 10ರಿಂದ ಭೈರವ ಪಿಲಿಚಾವಂಡಿ ಮೂರ್ತಿಲ್ಲಾಯ ದೈವಗಳ ನೇಮ, ನಂತರ ಧ್ವಜಾವರೋಹಣ.
ಮಾ.7ರಂದು ರಾತ್ರಿ 8ರಿಂದ ಕಲ್ಕುಡ, ಕಲ್ಲುರ್ಟಿ, ಕಾಳಮ್ಮ ದೈವಗಳ ನೇಮೋತ್ಸವ ನೆರವೇರಲಿದೆ.
ಎಲ್ಲ ಕಾರ್ಯಕ್ರಮಗಳು ಕಾಂತ ಭಟ್ ಬೆಳುವಾಯಿ ಪೌರೋಹಿತ್ಯದಲ್ಲಿ ನಡೆಯಲಿದೆ.
ಭಕ್ತರು ಧನ ಸಹಾಯವನ್ನಿತ್ತು, ಗಂಧ ಪ್ರಸಾದ ಸ್ವೀಕರಿಸುವಂತೆ ಆನುವಂಶಿಕ ಆಸ್ರಣ್ಣ ಮತ್ತು ಪ್ರಧಾನ ಅರ್ಚಕ ಎಸ್. ಗೋಪಾಲಕೃಷ್ಣ ಉಪಾಧ್ಯಾಯ ಹಾಗೂ ಆಡಳಿತಾಧಿಕಾರಿ ಗಿರಿಯಪ್ಪ ಗೌಡ ಮನವಿ ಮಾಡಿದ್ದಾರೆ.