ಮಡಂತ್ಯಾರು: ಗ್ರಾಮ ಸಭೆಗೆ ಗ್ರಾಮಸ್ಥರ ಕೊರತೆ ಮತ್ತು ಇಲಾಖಾಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿದೆ ಎಂದು ರಾಜಶೇಖರ್ ಶೆಟ್ಟಿ ಹೇಳಿದರು.
ನಮಗಾಗಿ ಇರುವ ಅಧಿಕಾರಿಗಳು, ಅಧಿಕಾರಿಗಳೇ ಇಲ್ಲದಿದ್ದರೆ ಗ್ರಾಮ ಸಭೆ ಯಾಕೆ? ಇಷ್ಟು ಹೈವೇಯ ಸಮಸ್ಯೆಗಳಿದೆ ಆದರೂ ಅಧಿಕಾರಿಗಳ ಗೈರು ಹಾಜರಿಯಿಂದ ಗ್ರಾಮ ಸಭೆ ರದ್ದು ಮಾಡಲಾಗಿದೆ ಎಂದು ಅಧ್ಯಕ್ಷೆ ರೂಪ ರವರು ಘೋಷಿಸಿದರು.
ಮಡಂತ್ಯಾರ್ ಗ್ರಾಮ ಪಂಚಾಯತ್ ನ 2023-24ನೇ ಸಾಲಿನ ದ್ವೀತಿಯ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ರೂಪ ಎ.ಎಸ್ ಇವರ ಅಧ್ಯಕ್ಷತೆಯಲ್ಲಿ ಫೆ.26ರಂದು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಬೇಕಿತ್ತು.
ಮಡಂತ್ಯಾರು ಪಶು ಇಲಾಖೆಯ ಪಶುವೈದಾಧಿಕಾರಿ ಡಾ.ವಿನಯ್ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು.
ಪಂಚಾಯತ್ ಉಪಾಧ್ಯಕ್ಷ ಗೋಪಾಲಕೃಷ್ಣ ಕೆ, ಸದಸ್ಯರುಗಳಾದ ಕಿಶೋರ್ ಕುಮಾರ್ ಶೆಟ್ಟಿ, ಸಂಗೀತ, ವಿಶ್ವನಾಥ್ ಪೂಜಾರಿ, ಆಗ್ನೆಸ್ ಮೋನಿಸ್, ಮೋಹಿನಿ, ಹರಿಪ್ರಸಾದ್ ಶೆಟ್ಟಿ, ಉಮೇಶ್ ಸುವರ್ಣ, ಹನೀಫ್, ಸರಸನಫ್, ಪಾರ್ವತಿ, ಶೈಲೇಶ್ ಕುಮಾರ್, ರಾಜೀವ, ಶೀಲಾವತಿ, ಶಶಿಪ್ರಭಾ ಉಪಸ್ಥಿತರಿದ್ದರು.
ಕಾರ್ಯದರ್ಶಿ ಮೊರ್ಲಿನ್ ಕ್ರಿಸ್ತೀನ್ ಡಿಸೋಜಾ ಲೆಕ್ಕ ಪತ್ರ, ವರದಿ, ವಾರ್ಡ್ ಸಭೆ ವಿವರ ಮಂಡಿಸಿದರು.ಅಭಿವೃದ್ಧಿ ಅಧಿಕಾರಿ ಡಾ. ಪ್ರಕಾಶ್ ಎಸ್. ಸ್ವಾಗತಿಸಿದರು.