ಕಲ್ಮಂಜ ಸ.ಪ್ರೌ.ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘ ರಚನೆ

0

ಕಲ್ಮಂಜ: ಸರಕಾರಿ ಪ್ರೌಢಶಾಲೆ ಕಲ್ಮಂಜ ಇದರ 2024-25ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಫೆ.25ರಂದು ರಚಿಸಲಾಯಿತು.

ಅಧ್ಯಕ್ಷರಾಗಿ ನವೀನ್ ಗೌಡ, ಉಪಾಧ್ಯಕ್ಷರಾಗಿ ಸುಮಲತಾ, ಕಾರ್ಯದರ್ಶಿಯಾಗಿ ಅಶೋಕ್ ಪೂಜಾರಿ ಬಳ್ಳಿದಡ್ಡ, ಜೊತೆ ಕಾರ್ಯದರ್ಶಿಯಾಗಿ ಆಶಾ, ಸಂಚಾಲಕರಾಗಿ ಸುಹಾಸ್, ಸಹ ಸಂಚಾಲಕರಾಗಿ ಹರೀಶ್, ಮಾಧ್ಯಮ ಪ್ರತಿನಿಧಿಯಾಗಿ ರವಿಕುಮಾರ್, ನಿಧಿ ಪ್ರಮುಖ್ ಶೇಖರ್, ಖಜಾಂಚಿಯಾಗಿ ಶಾಲಾ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ಆಯ್ಕೆಯಾದರು.

ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಮಂಜುನಾಥ್ ಶೆಟ್ಟಿ ನಿಡಿಗಲ್, ಶಿಕ್ಷಕಿಯಾರಾದ ಸವಿತಾ, ಪ್ರೇಮಲತಾ ಹಾಗೂ ಹೆಚ್ಚಿನ ಸಂಖ್ಯೆಯ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here