





ಬೆಳಾಲು: ಮಾಯ ಶ್ರೀ ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಫೆ.20ರಿಂದ 24ರವರೆಗೆ ಆಲಂಬಾಡಿ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.




ಫೆ.23ರಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ಪಲ್ಲಪೂಜೆ, ಅನ್ನ ಸಂತರ್ಪಣೆ, ನಂತರ ಒಡಿಯೂರು ರವಿರಾಜ್ ಬಳಗದಿಂದ ಗಾನ ಸುರಭಿ ನೆರವೇರಿತು.
ಸಂಜೆ ಜನಾರ್ದನ ಪೆಲತ್ತಡಿ ಬಳಗದಿಂದ ಭಕ್ತಿಗಾನ ಸುಧೆ, ಮಾಯ ಗುತ್ತು ಮನೆಯಿಂದ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ಭಂಡಾರ ಆಗಮನ, ರಾತ್ರಿ ರಥೋತ್ಸವ, ಭೂತಬಲಿ ಶಯನೋತ್ಸವ ನೆರವೇರಿತು.

ಫೆ.24ರಂದು ಬೆಳಿಗ್ಗೆ ಗಣಹೋಮ, ಕವಾಟೋದ್ಘಾಟನೆ, ಮಹಾಪೂಜೆ, ಸಂಜೆ ಅವಭ್ರತ, ಧ್ವಜಾವರೋಹಣ, ನಿತ್ಯ ಪೂಜೆ, ರಂಗ ಪೂಜೆ, ರಾತ್ರಿ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳಿಗೆ ನೇಮ ಬಲಿ, ಗುತ್ತಿನ ಮನೆಗೆ ಭಂಡಾರ ನಿರ್ಗಮನದೊಂದಿಗೆ ವಾರ್ಷಿಕ ಜಾತ್ರೆ ಸಂಪನ್ನಗೊಳ್ಳಲಿದೆ.








