ಕರಾವಳಿಯಲ್ಲೇ ಪ್ರಪ್ರಥಮ ಬಾರಿಗೆ ಮಕ್ಕಳನ್ನು ಸರಕಾರಿ ಅಧಿಕಾರಿಗಳನ್ನಾಗಿಸುವ ಬಗ್ಗೆ ವಿಶಿಷ್ಟ ಬೇಸಿಗೆ ಶಿಬಿರ- ವಿದ್ಯಾಮಾತಾ ಅಕಾಡೆಮಿಯಿಂದ ಆಯೋಜನೆ- 5ರಿಂದ ಪಿಯುಸಿ ವರೆಗಿನ ಮಕ್ಕಳಿಗೆ ಸುವರ್ಣಾವಕಾಶ

0

ಪುತ್ತೂರು: ಕರಾವಳಿ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿಶಿಷ್ಟ ಪ್ರಯೋಗಗಳ ಮೂಲಕ ಸಂಚಲನ ಉಂಟು ಮಾಡಿ, ನೂರಾರು ವಿದ್ಯಾರ್ಥಿಗಳು ವಿವಿಧ ಇಲಾಖೆಯ ಅಧಿಕಾರಿಗಳಾಗಲು ಕಾರಣೀಭೂತವಾದ ಪ್ರತಿಷ್ಟಿತ ವಿದ್ಯಾಮಾತಾ ಅಕಾಡೆಮಿಯು ನೂತನ ಸಾಲಿನಲ್ಲೂ ಬೇಸಿಗೆ ರಜೆ ಅವಧಿ ವೇಳೆ ವಿನೂತನ ಶಿಬಿರವನ್ನು ಆಯೋಜನೆ ಮಾಡಿದೆ.

ಸದ್ಯ ಐದನೇ ತರಗತಿಯ ಮಕ್ಕಳಿಂದ ಹಿಡಿದು, ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಗುಮಾಸ್ತ ಹುದ್ದೆಯಿಂದ ಅತ್ಯುನ್ನತ ಐ.ಎ.ಎಸ್ ವರೆಗಿನ ವಿವಿಧ ಶ್ರೇಣಿಗಳ ಸರಕಾರಿ ಉದ್ಯೋಗಕ್ಕೆ ಪ್ರಾಥಮಿಕ ಹಂತದಲ್ಲಿ ತರಬೇತಿಗೊಳಿಸುವ ಬಗೆಗಿನ ಬೇಸಿಗೆ ಶಿಬಿರವನ್ನು ಪುತ್ತೂರು ಮತ್ತು ಸುಳ್ಯ ಕಛೇರಿಯಲ್ಲಿ ಆಯೋಜಿಸುತ್ತಿದೆ.

ಶಿಬಿರವು ಏಪ್ರಿಲ್ 15ರಿಂದ ಮೇ 15ರವರೆಗೆ ಸುಮಾರು ಒಂದು ತಿಂಗಳ ಕಾಲ ನಡೆಯಲಿದೆ.ವಾರದ 5 ದಿನ (ಸೋಮವಾರದಿಂದ ಶುಕ್ರವಾರ) ಬೆಳಿಗ್ಗೆ 10ರಿಂದ ಮಧ್ಯಾಹ್ನ ೩ರವರೆಗೆ ತರಬೇತಿ ನಡೆಯಲಿದೆಯೆಂದು ಸಂಸ್ಥೆಯ ಅಧ್ಯಕ್ಷ ಭಾಗ್ಯೇಶ್ ರೈ ಮಾಹಿತಿ ನೀಡಿದ್ದಾರೆ. ಶಿಬಿರದಲ್ಲಿ ಪ್ರತೀ ವಿದ್ಯಾರ್ಥಿಯ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವುದು, ಸಾಮಾನ್ಯ ಜ್ಞಾನ ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ, ಭಾಷಾವಾರು ಅಗತ್ಯಗಳನ್ನು ಪರಿಶೀಲಿಸಿ ಧೈರ್ಯ ತುಂಬುವುದು, ಮಾನಸಿಕ ಸಾಮರ್ಥ್ಯ, ಗಣಿತ ಸೇರಿದಂತೆ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಾಥಮಿಕ ಹಂತದಿಂದಲೇ ತಯಾರಿ ಮಾಡುವ ಬಗೆಗಿನ ಇರಾದೆಯೊಂದಿಗೆ ಈ ಶಿಬಿರವನ್ನು ಆಯೋಜಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ಹೆಸರನ್ನು ಆಧಾರ್ ಪ್ರತಿ, ಫೊಟೋ ನೀಡಿ ನೋಂದಾಯಿಸಿಕೊಳ್ಳಬೇಕು.ಶಿಬಿರದ ಗೌರವ ಧನವನ್ನು ಪಾವತಿಸಬೇಕಾಗುತ್ತದೆ.ನೋಂದಣಿಗಾಗಿ ವಿದ್ಯಾಮಾತಾ ಅಕಾಡೆಮಿಯ ಪುತ್ತೂರು ಅಥವಾ ಸುಳ್ಯ ಶಾಖೆಗಳಿಗೆ ಭೇಟಿ ನೀಡುವಂತೆ ಅಥವಾ ದೂರವಾಣಿ ಸಂಖ್ಯೆ ಪುತ್ತೂರು ಕಛೇರಿ: 9148935808, 9620468869, ಸುಳ್ಯ ಕಛೇರಿ: 9448527606 ಸಂಪರ್ಕಿಸುವಂತೆ ಕೋರಲಾಗಿದೆ.

ಕಳೆದ ಎರಡುವರೆ ವರುಷದಿಂದ ವಿವಿಧ ಹಂತದಲ್ಲಿ, ಐದು ವರ್ಷದ ಮಕ್ಕಳಿಂದ 40 ವಯೋಮಾನದವರೆಗಿನವರಿಗೂ ಬೇರೆ ಬೇರೆ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಆಯೋಜನೆ ಮಾಡಿದ್ದೇವೆ.ಈ ನಿಟ್ಟಿನಲ್ಲಿ ಗುಮಾಸ್ತ ಹುದ್ದೆಯಿಂದ ಐ.ಎ.ಎಸ್, ಐ.ಪಿ.ಎಸ್ ವರೆಗಿನ ಪೂರ್ವ ತಯಾರಿ ಹೇಗಿರಬೇಕು, ನವೋದಯ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆ ಸೇರಿದಂತೆ ವಿವಿಧ ರೀತಿಯ ಸ್ಕಾಲರ್ ಶಿಪ್‌ಗಳು ರಾಜ್ಯ, ರಾಷ್ಟ್ರ ಅದೇ ರೀತಿ ಅಂತರ್ರಾಷ್ಟ್ರೀಯ ಮಟ್ಟದಲ್ಲೂ ಕೂಡ ಸ್ಕಾಲರ್ ಶಿಪ್ ಲಭ್ಯವಿದ್ದು, ಅದಕ್ಕೆ ವಿವಿಧ ರೀತಿಯ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ.ಇದಕ್ಕೆಲ್ಲ ಪೂರಕವಾಗಿ ಒಂದು ತಿಂಗಳ ಶಿಬಿರವನ್ನು ಆಯೋಜನೆ ಮಾಡಿದ್ದೇವೆ.ಬೇಸಿಗೆ ಶಿಬಿರ ಅಂದರೆ ಸುಮ್ಮನೆ ಕಾಲಹರಣ ಮಾಡುವ ಶಿಬಿರವಾಗಿರದೇ, ಜೀವನದಲ್ಲಿ ಬದುಕು ಕಟ್ಟಿಕೊಳ್ಳಲು ಮುಂದೆ ಮಹತ್ತರವಾದ ಹೆಜ್ಜೆ ಆಗಬೇಕೆಂಬುದೇ ಅಕಾಡೆಮಿಯ ಆಶಯ.ಎಲ್ಲಾ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ ಎಂದು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here