ಮಚ್ಚಿನ 2023-24ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ

0

ಮಚ್ಚಿನ: ಮಚ್ಚಿನ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ದ್ವೀತಿಯ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಇವರ ಅಧ್ಯಕ್ಷತೆಯಲ್ಲಿ ಫೆ.16 ರಂದು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಹಿರಿಯ ಮಡಂತ್ಯಾರ್ ಪಶು ಇಲಾಖೆಯ ಪಶುವೈದಾಧಿಕಾರಿ ಡಾ. ವಿನಯ್ ರವರು ಗ್ರಾಮ‌ಸಭೆಯನ್ನು ಮುನ್ನಡೆಸಿದರು.

ಪಂಚಾಯತ್ ಉಪಾಧ್ಯಕ್ಷೆ ಸೋಮಾವತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೌರಿಶಂಕರ್ ಹೆಚ್ ಎಸ್, ಹಾಗೂ ಪಂಚಾಯತ್ ಸದಸ್ಯರುಗಳಾದ ಚಂದ್ರಕಾಂತ ನಿಡ್ದಾಜೆ, ಚಂದ್ರಶೇಖರ್ ಬಿ. ಎಸ್, ಪ್ರತಿಭಾ ಬಿ.ರೈ, ಪ್ರಮೋದ್ ಕುಮಾರ್, ಜಯಶ್ರೀ, ವಿಶ್ವರಾಜ್, ಕೆ. ರವಿಚಂದ್ರ, ಡೀಕಮ್ಮ, ರಮ್ಯಾಶ್ರೀ ಕೆ., ತಾರಾ ಎಂ. ಚೇತನ್ ಶುಭಾಕರ, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು.ಕಾರ್ಯದರ್ಶಿ ಸಂಜೀವ ಲೆಕ್ಕ ಪತ್ರ, ವರದಿ, ವಾರ್ಡ್ ಸಭೆ ವಿವರ ಮಂಡಿಸಿದರು.

ಅಭಿವೃದ್ಧಿ ಅಧಿಕಾರಿ ಗೌರಿಶಂಕರ್ ಹೆಚ್ ಎಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here