ಪಟ್ರಮೆ: ಸಂಕೇಶ ಮನೆ ನಿವಾಸಿ ಸುದೇಶ್ ನಿಧನ

0

ಪಟ್ರಮೆ: ಇಲ್ಲಿಯ ಸಂಕೇಶ ಮನೆ ನಿವಾಸಿ ಸುದೇಶ್ (38 ವ) ರವರು ಫೆ.13ರಂದು ನಿಧನರಾಗಿದ್ದಾರೆ.

ಎಂದಿನಂತೆ ರಾತ್ರಿ ಊಟ ಮಾಡಿ ಮಲಗಿದ ಸುಧೇಶ್ ರವರು ಬೆಳಗ್ಗೆ ಏಳದಿರುವಾಗ ತಂದೆ ಜಾರಪ್ಪ ಗೌಡರವರು ಒಳಗೆ ಹೋಗಿ ಕರೆದು, ನೋಡಿದಾಗ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದು ಹೃದಯಾಘಾತದಿಂದ ಮರಣ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.

ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಮೃತರು ತಂದೆ ಜಾರಪ್ಪ ಗೌಡ, ತಾಯಿ ಪುಷ್ಪಾವತಿ, ಪತ್ನಿ, ಇಬ್ಬರು ಪುತ್ರರು, ನಾಲ್ವರು ಸಹೋದರರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here