ಉಜಿರೆ ಶ್ರೀ ಧ.ಮಂ.ಆಂ.ಮಾ ಶಾಲೆಯಲ್ಲಿ ಪಾಲಕ ಶಿಕ್ಷಕರ ಸಭೆ

0

ಉಜಿರೆ: ಶ್ರೀ ಧ.ಮಂ ಆಂಗ್ಲ ಮಾಧ್ಯಮ ಶಾಲೆಯ ಪಾಲಕ ಶಿಕ್ಷಕರ ಸಭೆಯು ನಡೆಯಿತು.ಈ ಸಭೆಗೆ ಸಂಪನ್ಮೂಲ ವ್ಯಕ್ತಿಯಾಗಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಕ್ಷೇಮ ಪಾಲಾನ ಅಧಿಕಾರಿ, ಮಾನ್ಯ ಸೋಮಶೇಖರ್ ಶೆಟ್ಟಿ ಆಗಮಿಸಿ” ವಿದ್ಯಾರ್ಥಿಗಳು ಕಷ್ಟ ಪಡದೆ ಇಷ್ಟಪಟ್ಟು ಓದಬೇಕು ಪೋಷಕರು ವಿದ್ಯಾರ್ಥಿಗಳಲ್ಲಿ ಒಳ್ಳೆಯ ಹವ್ಯಾಸ ಬೆಳೆಸಿ ಶಿಸ್ತು ನಡತೆ ನೀಡಿ ಒಬ್ಬ ಜವಾಬ್ದಾರಿಯುತ ಪಾಲಕರಾಗಿ ಕಾರ್ಯನಿರ್ವಹಿಸಬೇಕು ಜೀವನದಲ್ಲಿ ನಾವು ‘3G’ ಳಂತೆ ವರ್ತಿಸಬೇಕು ಅಂದರೆ ಮಾತಾಜಿ ಪಿತಾಜಿ ಹಾಗೂ ಗುರೂಜಿಗಳನ್ನು ಗೌರವಿಸುವಂಥವರಾಗಿರಬೇಕು.

ಕೆಲವು ನೈಜ ಉದಾಹರಣೆಗಳನ್ನು ನೀಡಿ ಮಕ್ಕಳು ದಾರಿ ತಪ್ಪದಂತೆ ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು” ಎಂದು ನುಡಿದರು. ಶಾಲಾ 9ನೇ ತರಗತಿ ಶಿಕ್ಷಕಿ ಶ್ರೀಮತಿ ಧನ್ಯವತಿ ಸಭೆಯಲ್ಲಿ ವಿದ್ಯಾರ್ಥಿಗಳು ಯಾವ ರೀತಿಯಿಂದ ಮೌಲ್ಯಂಕನ ಪರೀಕ್ಷೆಗೆ ಸಿದ್ಧರಾಗಬೇಕು ಹಾಗೂ ಮೌಲ್ಯಂಕನ ಪರೀಕ್ಷೆಯ ಕುರಿತು ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾಮುಖ್ಯೋಪಾಧ್ಯಾಯನಿ ವಿದ್ಯಾ ಲಕ್ಷ್ಮಿ ಇವರು ವಿದ್ಯಾರ್ಥಿಗಳು ಯೂಟ್ಯೂಬ್ ನೋಡಿ ಅನೇಕ ಆಟಗಳನ್ನು ಕಲಿತು ಅದನ್ನು ತರಗತಿಯಲ್ಲಿ ಪ್ರಯೋಗಿಸುತ್ತಿದ್ದಾರೆ.ಪಾಲಕರು ಮಕ್ಕಳನ್ನು ಇದರಿಂದ ದೂರವಿರಿಸಿ ಮಕ್ಕಳಲ್ಲಿ ಸೃಜನಶೀಲ ಆಲೋಚನೆಗಳನ್ನು ಮಾಡುವ ಹವ್ಯಾಸ ಬೆಳೆಸಬೇಕು.

ನಮ್ಮ ಸಂಸ್ಥೆಯು ವಿದ್ಯಾರ್ಥಿಗಳ ಅಭಿವೃದ್ಧಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ನೀಡುತ್ತಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಪಾಲಕರು ವಿದ್ಯಾರ್ಥಿಗಳ ಅಭಿವೃದ್ಧಿಗೆ ನಮ್ಮೊಂದಿಗೆ ಕೈಜೋಡಿಸುವಂತೆ ತಿಳಿಯಪಡಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ರೇಷ್ಮಾ ಸ್ವಾಗತಿಸಿದರು ಹಾಗೂ ಶಿಕ್ಷಕ ಹರೀಶ್ ವಂದಿಸಿದರು.

p>

LEAVE A REPLY

Please enter your comment!
Please enter your name here