ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಸಿಬ್ಬಂದಿಗಳ ಭಜನಾ ವಾರ್ಷಿಕೋತ್ಸವ ಸಮಾರಂಭ

0

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕ ಇಲ್ಲಿಯ ಸಿಬ್ಬಂದಿಗಳ ಭಜನಾ ತಂಡದ ಸಹಯೋಗದಲ್ಲಿ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜರಗಿದ ೯ನೇ ವರ್ಷದ ಭಜನಾ ವಾರ್ಷಿಕೋತ್ಸವ ಸಮಾರಂಭವು ಇಂದು ಸಾಯಂಕಾಲ ಜರಗಿದ ಧಾರ್ಮಿಕ ಸಭಾಕಾರ್ಯಕ್ರಮದೊಂದಿಗೆ ಆರಂಭಗೊಂಡಿತು.

ಸಾಯಂ.ಘಂಟೆ 6.00ಕ್ಕೆ ಸರಿಯಾಗಿ ಕರ್ನಾಟಕ ಸರಕಾರ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಭಾರತದ ಭೂಸೇನೆಯ ನಿವೃತ್ತ ಕ್ಯಾಪ್ಟನ್ ಆಗಿರುವ ಶ್ರೀ ಗಣೇಶ್ ಕಾರ್ಣಿಕ್ ಇವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮವು ದೀಪ ಪ್ರಜ್ವಲನೆ ಮಾಡುವ ಮುಖೇನ ಚಾಲನೆಗೊಂಡಿತು.

ತಮ್ಮ ಶುಭನುಡಿಗಳಲ್ಲಿ ಭಾರತದ ಸಾಂಪ್ರಾದಾಯಿಕ ಪರಂಪರೆಯು ನಶಿಸುವ ಹಂತಕ್ಕೆ ಬಂದಾಗ ಇಂದಿಗೆ ಅದು ಬದಲಾಗಿ ಜನರಿಗೆ ಸತ್ಯದ ಅರಿವಾಗುತ್ತಿದ್ದು ನಾವು ನಮ್ಮ ಮೂಲ ಪರಂಪರೆ ಮತ್ತು ಆರಾಧನಾ ಪದ್ಧತಿಯನ್ನು ಮರಳಿ ಪಡೆಯುತ್ತಿದ್ದೇವೆ ಮತ್ತು ಆಚರಿಸುತ್ತಿದ್ದೇವೆ ಎಂಬುದಕ್ಕೆ ಇಂದಿನ ಸೌಖ್ಯವನ ಭಜನಾ ತಂಡದ ವಾರ್ಷಿಕೋತ್ಸವವು ಅತ್ಯಂತ ಸ್ತುತ್ಯರ್ಹ ಎಂಬುದಾಗಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.ಪ್ರತಿಯೊಬ್ಬರ ಮನೆಮನಗಳಲ್ಲೂ ಭಜನೆಯು ಪ್ರತೀ ದಿನ ದೇವರ ನಾಮಸ್ಮರಣೆಯೊಂದಿಗೆ ಪಟಿಸಿದಲ್ಲಿ ಮನುಷ್ಯನ ಮಾನಸಿಕ ಮತ್ತು ದೈಹಿಕ ಆರೋಗ್ಯವು ಶಕ್ತಿಯುತವಾಗಿರುವುದೆಂದು ತಮ್ಮ ಶುಭನುಡಿಯಲ್ಲಿ ತಿಳಿಸಿದರು.

ಕರ್ನಾಟಕ ಸರಕಾರದ ಆಯುಷ್ ಇಲಾಖೆಯ ಅಧಿಕಾರಿಯಾಗಿರುವ ಡಾ.ಹರೀಶ್ ಬಾಬುರವರು ತಮ್ಮ ಸಂದೇಶದಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಭಜನೆಗೂ ಅವೀನಾಭಾವ ಸಂಬಂಧವಿದ್ದು ಕೆಲವು ಕಾಯಿಲೆಗಳು ಸಂಗೀತದ ಅಲೆಯಿಂದ ವಾಸಿಯಾಗುವುದಾಗಿ ತಿಳಿಸಿದರು.ಸಮಾರಂಭದಲ್ಲಿ ಉಪಸ್ಥಿತರಿದ್ದ ಗಾನಮಾಂತ್ರಿಕ ಪುತ್ತೂರಿನ ಜಗದೀಶ್ ಆಚಾರ್ಯರವರನ್ನು ಸಂಸ್ಥೆಯ ವತಿಯಿಂದ ಸನ್ಮಾನ ಪತ್ರ ನೀಡಿ ಮಾನ್ಯ ಕಾರ್ಯದರ್ಶಿ ಸೀತಾರಾಮ್ ಸರ್‌ರವರು ಗೌರವಿಸಿ, ತಮ್ಮ ನುಡಿಗಳಲ್ಲಿ ಸೌಖ್ಯವನ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಒಗ್ಗೂಡಿ ಕೈಗೊಳ್ಳುವ ಈ ಕಾರ್ಯಕ್ರಮವು ಡಾ.ಡಿ ವೀರೇಂದ್ರ ಹೆಗ್ಗಡೆಯವರ ಕೃಪಾರ್ಶೀವಾದದೊಂದಿಗೆ ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ಜರಗುತ್ತಿದ್ದು ಸಂಸ್ಥೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗಳ ಅವಿರತ ಶ್ರಮವು ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ಪಾರುಪತ್ಯಗಾರರಾಗಿರುವ ಲಕ್ಷ್ಮೀನಾರಾಯಣ ರಾವ್ ಮತ್ತು ಬಿ ಭುಜಬಲಿ ಇವರು ತಮ್ಮ ಸಂದೇಶವನ್ನು ನೀಡಿದರು.ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿಯವರಾದ ಡಾ.ಗೋಪಾಲ ಪೂಜಾರಿಯವರು ಸೌಖ್ಯವನ ಸಂಸ್ಥೆಯಲ್ಲಿ ಪ್ರತೀ ದಿನ ನಡೆಯುವ ಭಜನೆಯ ಮಹತ್ವವನ್ನು ತಿಳಿಸಿದರು.ಸಭಾಕಾರ್ಯಕ್ರಮದ ನಂತರ ಜಗದೀಶ್ ಆಚಾರ್ಯ ಮತ್ತು ತಂಡದಿಂದ 2 ಘಂಟೆಗಳ ಕಾಲ ಭಕ್ತಿಗೀತೆಗಳ ಗಾನಮೃತವು ನಡೆಯಿತು.

ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ್ ಕುಮಾರ್‌ರವರು ಪ್ರಸ್ತಾವನೆಯೊಂದಿಗೆ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು.ಸ್ಥಾನಿಕ ವೈದ್ಯಾಧಿಕಾರಿ ಡಾ.ಶೋಭಿತ್ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿ, ಡಾ.ಪೂಜಾ ಜಿ ವಂದನಾರ್ಪಣೆಗೈದರು.

ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳ ನಾಲ್ಕು ತಂಡದಿಂದ ಕುಣಿತ ಭಜನೆಯು ಜರಗಿ ಮಧ್ಯ ರಾತ್ರಿ ಊರಿನ ಭಕ್ತಾಧಿಗಳು ಪಾಲ್ಗೊಂಡು ಶ್ರೀ ದೇವರಿಗೆ ಮಹಾಪೂಜೆ ಮಂಗಳಾರತಿಯೊಂದಿಗೆ ಪ್ರಸಾದ ವಿತರಣೆಯಾಗಿ ಕಾರ್ಯಕ್ರಮವು ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here