ಕುವೆಟ್ಟು: ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ ರಸ್ತೆ ಅಗಲೀಕರಣ ಹೆದ್ದಾರಿಯ ಕೆಲಸ ನಡೆಯುತ್ತಿದ್ದು ಮದ್ದಡ್ಕ ಪೇಟೆಯಲ್ಲಿ ಚರಂಡಿಯ ಕೆಲಸವನ್ನು ಸಂಪೂರ್ಣಗೊಳಿಸದೆ ಕಳೆದ ಒಂದು ತಿಂಗಳ ಹಿಂದೆ ಸ್ತಗಿತಗೊಳಿಸಿದ್ದು ಪೇಟೆಯ ವರ್ತಕರಿಗೆ ಬ್ಯಾಂಕ್ ಹೋಟೆಲ್ ಇನ್ನಿತರ ವ್ಯಾಪರಸ್ಥರಿಗೆ, ಗ್ರಾಹಕರಿಗೆ, ಪೇಟೆಯ ಜನತೆ ಬಹಳ ತೊಂದರೆಯನ್ನು ಅನುಭವಿಸುತ್ತಿದ್ದು ತಕ್ಷಣ ಕಾಮಗಾರಿಯನ್ನು ಪ್ರಾರಂಭ ಮಾಡುವಂತೆ ಸಂಬಂದ ಪಟ್ಟ ಅಧಿಕಾರಿಗಳನ್ನು ಸಂಪರ್ಕ ಮಾಡಿ ತಿಳಿಸಬೇಕು ಎಂದು ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿ ಗೀತಾ ರವರನ್ನು ಮನವಿ ನೀಡುವ ಮೂಲಕ ಫೆ.12ರಂದು ಒತ್ತಾಯಿಸಲಾಯಿತು.
ತಕ್ಷಣ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ ಮಾಹಿತಿ ಪಡೆದುಕೊಂಡು 3 ದಿನಗಳಲ್ಲಿ ಮದ್ದಡ್ಕ ಪೇಟೆಯ ಎಲ್ಲಾ ವ್ಯಾಪರಸ್ಥರ ಸಭೆಯನ್ನು ಕರೆದು ತೊಂದರೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಅಬ್ಬೋನ್ ಮದ್ದಡ್ಕ, ಶ್ರೀ ದುರ್ಗಾ ಟ್ರೇಡರ್ಸ್ ನ ಮಾಲಕ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಶೇಖರ್ ಶೆಟ್ಟಿ ಹೋಟೆಲ್ ದತ್ತಗುರು, ಮದ್ದಡ್ಕ ವರ್ತಕರ ಸಘದ ಸದಸ್ಯರಾದ ವೈ ಕೆ ಸ್ಟೋರ್ ಇದರ ಮಾಲಕ ಯಾಕುಬ್ ಮತ್ತು ಉಮೇಶ್ ಕುಮಾರ್ ಮನು ಸ್ಟುಡಿಯೋ ಮದ್ದಡ್ಕ ಉಪಸ್ಥಿತರಿದ್ದರು.