ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ 2023-24ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನದ ಶೈಕ್ಷಣಿಕ ಕಾರ್ಯಕ್ರಮವು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕುಕ್ಕೇಡಿ ಬುಳೆಕ್ಕಾರ ನಲ್ಲಿ ಫೆ.10ರಂದು ನಡೆಯಿತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಶೃಂಗೇರಿ ಸ.ಪ್ರ.ದ.ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ರವಿಶಂಕರ್ ಬಿ ಮತ್ತು ಪುಂಜಾಲಕಟ್ಟೆ ಸ.ಪ್ರ.ದ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಡಾ|ಶೈಲೇಶ್ ಕುಮಾರ್ ಡಿ ಹೆಚ್ ಆಗಮಿಸಿದ್ದರು.
ಅತಿಥಿಯಾಗಿ ಪುಂಜಾಲಕಟ್ಟೆ ಕೆಪಿಎಸ್ ದೈಹಿಕ ಶಿಕ್ಷಕರು ರಾಜೇಶ್ ಇವರು ಸಹಕರಿಸಿದರು.
ಶಾರೀರಿಕ ಶಿಕ್ಷಣವನ್ನು ತಿಳಿಸುವ ಚಟುವಟಿಕೆಗಳು ಮತ್ತು ಸ್ವ ಅರಿವನ್ನು ಮೂಡಿಸುವ ಮಾತ್ರವಲ್ಲದೆ ದೇಹ ಮತ್ತು ಮನಸ್ಸಿನ ಸಾಮಾಸ್ಯವನ್ನು ತಿಳಿದುಕೊಳ್ಳುವಂತಹ ದೈಹಿಕ ಚಟುವಟಿಕೆಗಳನ್ನು ಮಾಡಿಸಿದರು. ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.
ರಾ.ಸೇ.ಯೋಜನೆಯ ಶಿಬಿರಾರ್ಥಿ ಸುಶ್ಮಿತಾ ಸ್ವಾಗತಿಸಿ , ಕವಿತಾ ಧನ್ಯವಾದವಿತ್ತರು, ಕು.ಮಧುಶ್ರೀ ಕಾರ್ಯಕ್ರಮ ನಿರೂಪಿಸಿದರು.
ಮೂರನೇ ದಿನದ ವಾರ್ಷಿಕ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಚಂದ್ರಶೇಖರ, ಉಜಿರೆ ಎಸ್ ಡಿ ಎಂ ಸೆಕೆಂಡರಿ ಶಾಲೆ ಸಹ ಶಿಕ್ಷಕರು ಆಗಮಿಸಿದ್ದರು.
ಕಲಿಕೆಯಲ್ಲಿನ ನೂನ್ಯತೆ ಹಾಗು ನೂನ್ಯತೆಗೆ ಕಾರಣ , ಧ್ಯಾನ ಮಾಡುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಮತ್ತು ಹದಿಹರೆಯದ ಸವಾಲುಗಳ ಕುರಿತಾಗಿ ಮಾಹಿತಿ ನೀಡಿದರು.
ರಾ.ಸೇ.ಯೋ.ಯ ಶಿಬಿರಾರ್ಥಿ ಅರ್ಚನಾ ಸ್ವಾಗತಿಸಿ, ಡಿ.ಮಾನ್ವಿತಾ ಧನ್ಯವಾದವಿತ್ತರು.ಕಾರ್ಯಕ್ರಮವನ್ನು ಕು.ವಿದ್ಯಾ ನಿರೂಪಿಸಿದರು.