ಅರಸಿನಮಕ್ಕಿ ಪಿ.ಡಿ.ಓ ಆಗಿ ಜಯರಾಜ್ ಅಧಿಕಾರ ಸ್ವೀಕಾರ- ರವಿ ಬಣಪ ಗೌಡರ್ ಗೆ ಬೀಳ್ಕೊಡುಗೆ

0

ಅರಸಿನಮಕ್ಕಿ: ಗ್ರಾಮ ಪಂಚಾಯತ್ ಗೆ ಶಿಬಾಜೆಯಲ್ಲಿ ಪಿ.ಡಿ.ಓ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಜಯರಾಜ್ ರವರು ಅಧಿಕಾರ ಸ್ವೀಕರಿಸಿದರು.

ಹಾಲಿ ಅರಸಿನಮಕ್ಕಿಯಲ್ಲಿ ಪಿ.ಡಿ.ಓ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರವಿ ಬಣಪ ಗೌಡರ್ ರವರು ಕಡಿರುದ್ಯಾವರ ಪಂಚಾಯತ್ ಗೆ ವರ್ಗಾವಣೆಗೊಂಡಿದ್ದು ಅರಸಿನಮಕ್ಕಿಯಲ್ಲಿ ಸುಮಾರು 2.5 ವರ್ಷ ಸೇವೆ ಸಲ್ಲಿಸಿದ ಅವರಿಗೆ ಇಂದು ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ, ಉಪಾಧ್ಯಕ್ಷರಾದ, ಸುಧೀರ್ ಕುಮಾರ್ ಎಂ. ಎಸ್, ಹಾಗೂ ಪಂಚಾಯತ್ ಸದಸ್ಯರು, ಸಿಬ್ಬಂದಿಗಳ ಸಮ್ಮುಖದಲ್ಲಿ ಬೀಳ್ಕೊಡಲಾಯಿತು.

ಕಾರ್ಯಕ್ರಮದ ಸ್ವಾಗತವನ್ನು ಪಂಚಾಯತ್ ಸಿಬ್ಬಂದಿ ವಿಂದ್ಯರವರು.ಧನ್ಯವಾದವನ್ನು ನೂತನ ಪಿಡಿಓ ಜಯರಾಜ್ ನೆರವೇರಿಸಿದರು.

LEAVE A REPLY

Please enter your comment!
Please enter your name here