ಕೋಟದಲ್ಲಿ ಗ್ರಾ.ಪಂ ಸದಸ್ಯರಿಗೆ ಕ್ರೀಡಾಕೂಟ: ಚಂದ್ರಯಾನ 3 ಬಾಹ್ಯಾಕಾಶ ನೌಕೆ ಸ್ಥಬ್ದ ಚಿತ್ರದಲ್ಲಿ ನಾರಾವಿ ಗ್ರಾ.ಪಂ.ಗೆ ಪ್ರಶಸ್ತಿ

0

ನಾರಾವಿ: ಡಾ.ಶಿವರಾಮ ಕಾರಂತ ಪ್ರತಿಷ್ಠಾನ ಹಾಗೂ ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೋಟದಲ್ಲಿ ಕ್ರೀಡಾಕೂಟದ ಅಂಗವಾಗಿ ನಡೆದ ವಿವಿಧ ಪಂಚಾಯತ್ ಗಳು ಆಯೋಜಿಸಿದ ಸ್ಥಬ್ದ ಚಿತ್ರದಲ್ಲಿ ನಾರಾವಿ ಗ್ರಾಮ ಪಂಚಾಯತ್ ತೃತೀಯ ಸ್ಥಾನ ಪಡೆದಿದೆ.

ಚಂದ್ರಯಾನ 3 ಬಾಹ್ಯಾಕಾಶ ನೌಕೆ ಸ್ಥಬ್ದ ಚಿತ್ರ ನೆರೆದವರ ಗಮನ ಸೆಳೆಯಿತು.

ಸ್ಪೀಕ‌ರ್ ಯು.ಟಿ ಖಾದರ್, ಮಾಜಿ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ, ಪಿಡಿಓ ಹಾಗೂ ಸದಸ್ಯರಿಗೆ ಪ್ರಶಸ್ತಿ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here