ಕುವೆಟ್ಟು ಗ್ರಾ.ಪಂ ಎಸ್.ಡಿ.ಪಿ.ಐ ಬೆಂಬಲಿತ ಸದಸ್ಯೆ ಮೋಹಿನಿ ನಿಧನ

0

ಕುವೆಟ್ಟು: ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯೆ ಮೋಹಿನಿ (42ವ) ಅವರು ಅಸೌಖ್ಯದಿಂದ ಫೆ.9 ರಂದು ನಿಧನರಾದರು.

ಇವರು ಕಳೆದ ಗ್ರಾಮ ಪಂಚಾಯತು ಚುನಾವಣೆಯಲ್ಲಿ ಎಸ್‌ಡಿಪಿಐ ಬೆಂಬಲಿತರಾಗಿ ಪಿಲಿಚಾಮುಂಡಿಕಲ್ಲು 1ನೇ ವಾರ್ಡ್‌ಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಪಂಚಾಯತು ಸದಸ್ಯರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ಪತಿ ಮೋನಪ್ಪ ನಾಯ್ಕ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಮೋಹಿನಿ ನಿಧನಕ್ಕೆ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಕ್ಟ‌ರ್, ಬೆಳ್ತಂಗಡಿ ಸಮಿತಿ ಅಧ್ಯಕ್ಷ ನವಾಝ್ ಕಟ್ಟೆ, ಉಪಾಧ್ಯಕ್ಷ ಹನೀಫ್ ಪುಂಜಾಲಕಟ್ಟೆ, ಕಾರ್ಯದರ್ಶಿ ಅಶ್ವಕ್ ಪುಂಜಾಲಕಟ್ಟೆ, ಗ್ರಾ.ಪಂ ಸದಸ್ಯರಾದ ಮುಸ್ತಫಾ, ಸಮೀರ್, ರಿಯಾಝ್, ಸದಸ್ಯರಾದ ಸಾಲಿ, ಅಮೀನಾ, ಮೈಮುನಾ, ಮದ್ದಡ್ಕ ಹಾಗೂ ಪಕ್ಷದ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here