ಧರ್ಮಸ್ಥಳ: ಜನರು ಹೂಡಿಕೆಯಿಂದ ಆರ್ಥಿಕ ಸ್ವಾವಲಂಬನೆ ಹೊಂದುವ ಕುರಿತು “ಅರಾ ಫೈನಾಶ್ಶಿಯಲ್ ಸರ್ವಿಸಸ್” ನವರು ಹೊರ ತಂದಿರುವ “ಸ್ಟಾರ್ಟಿಂಗ್ ಔಟ್” ಎಂಬ ವೀಡಿಯೋವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.
ಈ ವೀಡಿಯೋದಲ್ಲಿ ವಿದ್ಯಾಭ್ಯಾಸ ಮುಗಿಸಿ ಉದ್ಯೋಗದಲ್ಲಿರುವವರು, ಚಿಕ್ಕ ವ್ಯವಹಾರ, ಇತರ ವೃತ್ತಿಯಲ್ಲಿರುವವರು ತಮ್ಮ ಆದಾಯವನ್ನು ಸರಿಯಾಗಿ ಆಲೋಚಿಸಿ ಹೂಡಿಕೆ ಮಾಡುವುದು ಹೇಗೆ ಅನ್ನುವುದರ ಬಗ್ಗೆ ಸ್ಟಾರ್ಟಿಂಗ್ ಔಟ್ ವೀಡಿಯೋದಲ್ಲಿ ವಿವರಿಸಲಾಗಿದೆ.
ಈ ವೇಳೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ” ಮ್ಯೂಚುವಲ್ ಫಂಡ್ ನಲ್ಲಿ ದೀರ್ಘಾವಧಿ ಹೂಡಿಕೆ ಮಾಡಿದ್ರೆ ಅಪಾಯ ಕಡಿಮೆ, ಅಪಾಯ ಸಂದರ್ಭದಲ್ಲಿ ಫೈನಾಶ್ಶಿಯಲ್ ಕಂಪೆನಿಯವರು ನೆರವಾಗುತ್ತಾರೆ. ಆಲೋಚಿಸಿ ಹೂಡಿಕೆ ಮಾಡಿ” ಎಂದರು.
ಬಿಡುಗಡೆಯ ವೇಳೆ ಎಸ್ ಕೆ ಡಿಆರ್ ಡಿ ಪಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಹೆಚ್.ಮಂಜುನಾಥ್, ಅರಾ ಫೈನಾಶ್ಶಿಯಲ್ ಸರ್ವಿಸಸ್ ಬೆಂಗಳೂರು ಇದರ ನಿರ್ದೇಶಕ ಶ್ರೀಧರ ಆರ್ ಭಟ್, ಅರಾ ಸಂಸ್ಥೆಯ ಪಾಲುದಾರ ಪ್ರತೀಕ್ ಓರಾ , ಅರಾ ಸಂಸ್ಥೆಯ ಉಜಿರೆಯ ಶಾಖೆಯ ಪ್ರಬಂಧಕರಾದ ಜನಾರ್ಧನ ಪಡ್ಡಿಲ್ಲಾಯ ಉಪಸ್ಥಿತರಿದ್ದರು.