ಮಾಚಾರು ಉರೂಸ್‌ಗೆ ಚಾಲನೆ: ಧ್ವಜಾರೋಹಣ, ಸಾಮೂಹಿಕ ಪ್ರಾರ್ಥನೆ

0

ಬೆಳ್ತಂಗಡಿ: ಉಜಿರೆ ಸನಿಹದ ಮಾಚಾರು ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ಹಾಗೂ ಮುಹಮ್ಮದ್ ವಲಿಯುಲ್ಲಾಹಿ ದರ್ಗಾ ಶರೀಫ್ ಇಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಮುಬಾರಕ್
ಕಾರ್ಯಕ್ರಮಕ್ಕೆ ಧ್ವಜಾರೋಹಣದ ಮೂಲಕ ಚಾಲನೆ ದೊರೆತಿದೆ.

ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ವನ್ನು ಅಕ್ಬರಾಲಿ ಬಂಡಸಾಲೆ ಮಾಚಾರು ನಡೆಸಿದರು.ಒಟ್ಟು ಉರೂಸ್ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಅಸ್ಸಯ್ಯಿದ್ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ಕೂರತ್ ವಹಿಸಿಕೊಳ್ಳಲಿದ್ದಾರೆ.

ಉರೂಸ್ ಉದ್ಘಾಟನೆಯ ಪ್ರಯುಕ್ತ ದರ್ಗಾಶರೀಫ್ ವಠಾರದಲ್ಲಿ ಕೂಟು ಝಿಯಾರತ್ (ಸಾಮೂಹಿಕ ಪ್ರಾರ್ಥನೆ) ನಡೆಯಿತು. ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಅಸ್ಸಯ್ಯಿದ್ ಸಾದಾತ್ ತಂಙಳ್ ಗುರುವಾಯನಕೆರೆ ನೇತೃತ್ವ ವಹಿಸಿದ್ದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಬಿ.ಎಮ್ ಇಲ್ಯಾಸ್ ವಹಿಸಿದ್ದರು.ಕಾರ್ಯದರ್ಶಿ ಇಕ್ಬಾಲ್ ಮಾಚಾರು, ಕೋಶಾಧಿಕಾರಿ ಹಸೈನಾರ್ ಟೈಲ್ಸ್, ಖತೀಬ್ ರಫೀಕ್ ಸಖಾಫಿ ಅಲ್ ಹಿಕಮಿ, ಸದರ್ ಮುಅಲ್ಲಿಮ್ ಡಿ.ಹೆಚ್ ಇಸ್ಮಾಯಿಲ್ ಸಖಾಫಿ, ಉಪಾಧ್ಯಕ್ಷ ಸಲೀಂ ಅಂಗಡಿ, ಎಸ್‌ವೈಎಸ್ ಅಧ್ಯಕ್ಷ ಕಬೀರ್ ಮಿಸ್ಬಾಹಿ, ಎಸ್ಸೆಸ್ಸೆಫ್ ಅಧ್ಯಕ್ಷ ಸಿದ್ದೀಕ್ ಚೆಕ್ಕೆದಡಿ, ಗೌರವಾಧ್ಯಕ್ಷ ಹಂಝ ಮಾಚಾರು ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಉರೂಸ್ ಪ್ರಯುಕ್ತ ಮೂರು ದಿನಗಳಲ್ಲಿ ನಡೆಯುವ ಧಾರ್ಮಿಕ ಪ್ರವಚನದ ಭಾಗವಾಗಿ ಪ್ರಥಮ ದಿನ ಯು.ಕೆ ಇಲ್ಯಾಸ್ ಮದನಿ ಪ್ರವಚನ ನಡೆಸಿದರು.

ಶನಿವಾರ ಉರೂಸ್ ಸಮಾರೋಪ:
ಫೆ.3ರಂದು ಶನಿವಾರ ಉರೂಸ್ ಸಮಾರೋಪ ಮತ್ತು ಆಧ್ಯಾತ್ಮಿಕ ಸಂಗಮ ಜರುಗಲಿದೆ.ಅಸ್ಸಯ್ಯಿದ್ ಜಝೀಲ್ ಶಾಮಿಲ್ ಅಲ್ ಇರ್ಫಾನಿ ಕಾಮಿಲ್ ಸಖಾಫಿ ಪ್ರೊಫೆಸರ್ ಮರ್ಕಝ್ ಕಾರಂದೂರು ಸಮಾರೋಪ ಭಾಷಣ ಮಾಡಲಿದ್ದಾರೆ.ಬಳಿಕ ಅನ್ನದಾನ ಇದೆ‌.

LEAVE A REPLY

Please enter your comment!
Please enter your name here