ಬೆಂಗಳೂರು: ಬೆಳ್ತಂಗಡಿ ಧರ್ಮಪ್ರಾಂತ್ಯದ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಉದ್ಘಾಟಕರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧರ್ಮಪ್ರಾಂತ್ಯದ ಪರವಾಗಿ ಬೆಳ್ತಂಗಡಿ ಧರ್ಮಪ್ರಾಂತ್ಯ ವಿಕಾರ್ ಜೆನರಲ್ ಅತಿ ವಂದನಿಯ ಫಾ.ಜೋಸ್ ವಲಿಯಪರಂಬಿಲ್ ಆಮಂತ್ರಣವನ್ನು ವಿಧಾನ ಸೌಧದಲ್ಲಿ ನೀಡಿದರು.
ಈ ಸಂದರ್ಭದಲ್ಲಿ ಕೆ ಎಸ್ ಎಂ ಸಿ ಎ ಮಾಜಿ ಪ್ರಾಂತಿಯ ಅಧ್ಯಕ್ಷ, ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಸಮಿತಿಯ ಮಾಜಿ ಸದಸ್ಯ ಸೇಬಾಷ್ಟಿಯನ್ ಕೆ ಕೆ, ವಂದನಿಯ ಫಾ.ರೋಷನ್ ಪುದುಶೇರಿ, ಕೆ ಎಸ್ ಎಂ ಸಿ ಎ ನಿರ್ದೇಶಕರು, ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿ ಇದರ ಧರ್ಮಗುರುಗಳಾದ ವಂದನಿಯ ಫಾ.ಶಾಜಿ ಮಾತ್ಯು ಜೊತೆಯಲ್ಲಿದ್ದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಇವರಿಗೂ ಆಹ್ವಾನ ನೀಡಲಾಯಿತು.
p>