


ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಬಸಲಿಂಗಯ್ಯ ಜಿ.ಸುಬ್ರಪುರಮಠ್ ಇಂದು (ಫೆ.2) ಅಧಿಕಾರ ಸ್ವೀಕರಿಸಿದ್ದಾರೆ.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಸತ್ಯನಾರಾಯಣ್ ಅವರು ಆಲ್ದೂರು ಠಾಣೆಗೆ ವರ್ಗಾವಣೆಗೊಂಡ ಬಳಿಕ ಪೊಲೀಸ್ ನೀರಿಕ್ಷಕ ಹುದ್ದೆ ಖಾಲಿ ಇತ್ತು.ಇದೀಗ ತೆರವಾದ ಹುದ್ದೆಗೆ ಬಸಲಿಂಗಯ್ಯ ಜಿ. ಸುಬ್ರಪುರಮಠ್ ಅವರು ನೇಮಕಗೊಂಡಿದ್ದಾರೆ.2011ರಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಸ್.ಐ.ಯಾಗಿ ಕಾರ್ಯ ನಿರ್ವಹಿಸಿದ್ದ ಇವರು ಬಳಿಕ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದರು.


ಲಂಚ, ಭ್ರಷ್ಟಾಚಾರ ವಿರುದ್ಧ ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಜನಾಂದೋಲನ ವೇದಿಕೆಯಿಂದ ನಡೆಯುತ್ತಿರುವ ಜಾಗೃತಿಯ ಫಲಕ ನೀಡಿ ಪೊಲೀಸ್ ಇನ್ಸ್ಪೆಕ್ಟರ್ ಬಸಲಿಂಗಯ್ಯ ಜಿ.ಸುಬ್ರಪುರಮಠ್ ಅವರನ್ನು ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಸುದ್ದಿಯ ತಾಲೂಕು ವರದಿಗಾರ ಮನೀಷ್ ಅಂಚನ್, ಅಕೌಂಟ್ ವಿಭಾಗದ ನೈನಾ ಪ್ರಸಾದ್ ಉಪಸ್ಥಿತರಿದ್ದರು.








