ಕುಪ್ಪೆಟ್ಟಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುಪ್ಪೆಟ್ಟಿಯಲ್ಲಿ 75ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಶಾಲಾ ಎಸ್ ಡಿ ಯಂ ಸಿ ಅಧ್ಯಕ್ಷ ಅಶ್ರಫ್ ಮುಂಡ್ರೊಟ್ಟು ರವರು ಧ್ವಜಾರೋಹಣವನ್ನು ನೆರವೇರಿಸಿದರು.ಕುಪ್ಪೆಟ್ಟಿ ಸಿ.ಆರ್.ಪಿ ಸಂಧ್ಯಾರವರು ದಿನಾಚರಣೆಯ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲೆಗೆ ಐ.ಎಸ್.ಎಫ್ ಮತ್ತು ಐ.ಇ.ಇ.ಇ ಡಿಜಿಟಲ್ ಕ್ಲಾಸ್ ರೂಮ್ ಪ್ರೊಜೆಕ್ಟ್ ವತಿಯಿಂದ ಕೊಡುಗೆಯಾಗಿ ನೀಡಿರುವ ಸೋಲಾರ್ ಬೇಸ್ಡ್ ಡಿಜಿಟಲ್ ಕ್ಲಾಸ್ ರೂಮ್ ನ ಉದ್ಘಾಟನೆಯನ್ನು ಐ.ಇ.ಇ.ಇ ಫೌಂಡೇಶನ್ ನ ಕ್ವಾರ್ಡಿನೇಟರ್ ಸ್ವರಾಜ್ ಮತ್ತು ಎನ್.ಐ.ಟಿ.ಕೆ ಸುರತ್ಕಲ್ ನ ಪ್ರೋಫೆಸರ್ ಮೋಹಿತ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಗ್ರಾಮೀಣ ಶಾಲೆಗಳಲ್ಲಿ ಈ ಯೋಜನೆಯ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಡಿಜಿಟಲ್ ಕ್ಲಾಸ್ ರೂಮ್ ನ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ವನಿತಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಯಂ.ಸಿ ಅಧ್ಯಕ್ಷ ಅಶ್ರಫ್ ಮುಂಡ್ರೊಟ್ಟು.ಸಿ.ಆರ್.ಪಿ ಸಂಧ್ಯಾ, ತಾಯಂದಿರ ಸಮಿತಿಯ ಅಧ್ಯಕ್ಷೆ ಚಂದ್ರಾವತಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಶೋಭಾ, ಮತ್ತು ಎಸ್.ಡಿ.ಎಮ್.ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿ ರೀಟಾ ರವರು ಕಾರ್ಯಕ್ರಮ ನಿರೂಪಿಸಿ, ಟಿ.ಜಿ.ಟಿ. ಶಿಕ್ಷಕಿ ರಶ್ಮಿ ಯವರು ವಂದಿಸಿದರು.ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಶಾಲಾ ಶಿಕ್ಷಕಿಯರಾದ ಪದ್ಮಾವತಿ, ಶಬನಬಾನು, ದಿವ್ಯಲಕ್ಷ್ಮಿ ಮತ್ತು ಕು.ರಕ್ಷಿತಾರವರು ಸಹಕರಿಸಿದರು.