ಧರ್ಮಸ್ಥಳದಲ್ಲಿ ಹಸ್ತಪ್ರತಿಗಳ ಸಂಶೋಧನೆ ಕುರಿತು ಒಡಂಬಡಿಕೆ ಪತ್ರ ಹಸ್ತಾಂತರ

0

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಗೌರವ ಉಪಸ್ಥಿತಿಯಲ್ಲಿ ಜ.30ರಂದು ಧರ್ಮಸ್ಥಳದಲ್ಲಿ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಕೇಂದ್ರ ಸರ್ಕಾರದ ರಾಷ್ಟ್ರೀಯ ಭಾರತೀಯ ಆಯುರ್ವಿಜ್ಞಾನ ಸಂಪದ ಸಂಸ್ಥಾನ, ಹೈದರಾಬಾದ್ ಮಧ್ಯೆ ಹಸ್ತಪ್ರತಿಗಳ ಸಂಶೋಧನೆ ಕುರಿತು ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಿ ಒಪ್ಪಿಗೆ ಸೂಚಿಸಲಾಯಿತು.

ಆಯುರ್ವಿಜ್ಞಾನ ಸಂಪದ ಸಂಸ್ಥಾನದ ಹೈದರಾಬಾದ್‌ನ ಸಹಾಯಕ ನಿರ್ದೇಶಕ ಡಾ.ಗೋಲಿ ಪೆಂಚಲ ಪ್ರಸಾದ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಸನದ ಪ್ರಾಂಶುಪಾಲರಾದ ಡಾ.ಪ್ರಸನ್ನ ಎನ್.ರಾವ್, ಉಪಪ್ರಾಂಶುಪಾಲರಾದ ಡಾ.ಶೈಲಜಾ, ಯು., ಸಂಹಿತಾ ಸಿದ್ಧಾಂತ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀನಾಥ ವೈದ್ಯ, ಪಂಚಕರ್ಮ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿಕುಮಾರ್ ಎಂ. ಮತ್ತು ಸಂಹಿತಾ ಸಿದ್ಧಾಂತ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here