ಫೆ.7: ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ವಾರ್ಷಿಕ ವರ್ಧಂತಿ ಉತ್ಸವ

0

ಅಳದಂಗಡಿ: ಅಳದಂಗಡಿ ಸುಂಕದಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಫೆ.7 ರಂದು ಪೊಳಲಿ ಕೋಡಿಮಜಲು ಅನಂತ ಪದ್ಮನಾಭಾ ಉಪಾಧ್ಯಾಯರ ನೇತೃತ್ವದಲ್ಲಿ ವಾರ್ಷಿಕ ವರ್ಧಂತಿ ಉತ್ಸವ ವಿವಿಧ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಬೆಳಿಗ್ಗೆ ಗಣಹವನ, ಕಲಶಾಭಿಷೇಕ, ಹವನ, ಶ್ರೀ ವಿನಾಯಕ ಭಜನಾ ಸಮಿತಿಯವರಿಂದ ಭಜನಾ ಸತ್ಸಂಗ, ಮಧ್ಯಾಹ್ನ ಮಹಾ ಮಂಗಳಾರತಿ, ಭೋಜನ ಪ್ರಸಾದ, ಸಂಜೆ ರಂಗ ಪೂಜೆ, ರಾತ್ರಿ ದೇವರ ಉತ್ಸವ, ಬಳಿಕ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ ಎಂದು ಅಧ್ಯಕ್ಷ ಎಂ.ಗಂಗಾಧರ ಮಿತ್ತಮಾರು, ಪ್ರಧಾನ ಅರ್ಚಕ ಎ.ಸೋಮನಾಥ ಮಯ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here